ಆಗಸ್ಟ್ 15, 1947 ರಲ್ಲಿ ಬ್ರಿಟಿಷರಿಂದ ತಾತ್ವಿಕವಾಗಿ ಸ್ವಾತಂತ್ರ್ಯವನ್ನು ಪಡೆದುಕೊಂಡ ದಿನವಾದರೆ, ಜನವರಿ 26, 1950 ಭಾರತ ತನ್ನ ಸಂವಿಧಾನವನ್ನು ಜಾರಿಗೊಳಿಸಿದ ದಿನವಾಗಿದೆ. ರಾಜ ಪ್ರಭುತ್ವವನ್ನು ತ್ಯಜಿಸಿ ಪ್ರಜಾಪ್ರಭುತ್ವದಲ್ಲಿ ತನ್ನ ನಿಜ ಅಸ್ಥಿತ್ವವನ್ನು ಸ್ಥಾಪಿಸಿದ ದಿನವಾಗಿದೆ. ಈ ಕಾರಣಕ್ಕಾಗಿ ಗಣರಾಜ್ಯೋತ್ಸವ ಭಾರತೀಯರ ಪಾಲಿಗೆ ಅತ್ಯಂತ ಮಹತ್ವದ ದಿನವಾಗಿದೆ. ಅತಿ ಶೀಘ್ರದಲ್ಲಿ ಭಾರತ ನಂ ೧ ಮಾದರಿಯಲ್ಲಿ ಅಭಿವೃದ್ಧಿ ದೇಶವಾಗಲಿದೆ ಎಂದು ಶಾಸಕ ಸವದಿ ತಿಳಿಸಿದರು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಾಮಪ್ಪ ಚಿಕ್ಕೋಡಿ ಕ್ರೀಡಾಂಗಣದಲ್ಲಿ ಜರುಗಿದ ೭೫ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
1929ರ ಲಾಹೋರ್ ನಲ್ಲಿ ನಡೆದ ಕಾಂಗ್ರೆಸ್ ಸೆಷನ್ನಲ್ಲಿ ಜವಹಾರ್ ಲಾಲ್ ನೆಹರು ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ, ಜನವರಿ 26, 1930 ರಲ್ಲಿ ದೇಶ ಸಂಪೂರ್ಣ ಸ್ವಾತಂತ್ರ್ಯ ಪಡೆಯಬೇಕೆಂಬ ನಿರ್ಣಯವನ್ನೂ ಕೈಗೊಳ್ಳಲಾಗಿತ್ತು. ಅದನ್ನೇ ಪೂರ್ಣ ಸ್ವರಾಜ್ ದಿವಸ್ ಅಥವಾ ಸ್ವಾತಂತ್ರ್ಯ ದಿನಾಚರಣೆಯನ್ನಾಗಿ ಘೋಷಣೆ ಮಾಡಲಾಗಿತ್ತು. ಆದರೆ ಇದು 1947ರ ವರೆಗೂ ಈಡೇರಲಿಲ್ಲ.
ಇದೇ ಸಂದರ್ಭದಲ್ಲಿ ರಬಕವಿ ಬನಹಟ್ಟಿ ತಹಶೀಲ್ದಾರ ಗೀರಿಶ ಬಿ ಸ್ವಾದಿ. ರಬಕವಿ ಬನಹಟ್ಟಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಸಿದ್ದು ಪಟ್ಟಿಹಾಳ. ರಬಕವಿ ಬನಹಟ್ಟಿ ನಗರಸಭೆ ಪೌರಾಯುಕ್ತ ಜಗದೀಶ್ ಈಟಿ. ಸಿ ಪಿ ಐ ಸಂಜು ಬಳಗಾರ. ಬಸವರಾಜ ಹನಗಂಡಿ. ಎ ಜಿ ಕಾಖಂಡಿಕಿ. ತೇರದಾಳ ಪಿಎಸ್ಐ ಅಪು ಐಗಳಿ. ಬನಹಟ್ಟಿ ಪಿಎಸ್ಐ ಶಾಂತಾ ಹಳ್ಳಿ ನಗರಸಭೆ ಸದಸ್ಯ ಯುನುಸ ಚೌಗಲಾ. ರಾಮಣ್ಣ ಹುಲಕುಂದ. ಬಸವರಾಜ ತೇಗಿ. ಸಂಜಯ ತೆಗ್ಗಿ. ಪ್ರಭು ಮುಧೋಳ. ಈಶ್ವರ ನಾಗರಾಳ. ಬಸವರಾಜ ಅಮ್ಮನಿಗಿಮಠ. ಚಿದಾನಂದ ಸೊಲ್ಲಾಪುರ. ಶಿವಾನಂದ ಬಾಗಲಕೋಟಮಠ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.