ಮೊಹಾಲಿ: ಬ್ಯಾಟರ್ಗಳ ಉತ್ತಮ ಆಟದಿಂದಾಗಿ ಆಸ್ಟ್ರೇಲಿಯಾ (Australia) ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ (Team India) 5 ವಿಕೆಟ್ಗಳ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.ʼ
ಗೆಲ್ಲಲು 277 ರನ್ಗಳ ಗುರಿಯನ್ನು ಪಡೆದ ಭಾರತ 48.4 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 281 ರನ್ ಹೊಡೆಯುವ ಮೂಲಕ ಜಯ ಸಾಧಿಸಿತು.
ಋತ್ರಾಜ್ ಗಾಯಕ್ವಾಡ್ (Ruturaj Gaikwad ) ಮತ್ತು ಶುಭಮನ್ ಗಿಲ್ (Shubman Gill ) ಮೊದಲ ವಿಕೆಟಿಗೆ 130 ಎಸೆತಗಳಲ್ಲಿ 142 ರನ್ ಹೊಡೆದರು. ಗಾಯಕ್ವಾಡ್ 71 ರನ್ (77 ಎಸೆತ, 10 ಬೌಂಡರಿ) ಹೊಡೆದು ಔಟಾದ ಬೆನ್ನಲ್ಲೇ ಶ್ರೇಯಸ್ ಅಯ್ಯರ್ 3 ರನ್ಗಳಿಸಿ ರನೌಟ್ ಆದರು. ಬೆನ್ನಲ್ಲೇ ಶುಭಮನ್ ಗಿಲ್ 74 ರನ್(63 ಎಸೆತ, 6 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರು. ಕೇವಲ 9 ರನ್ ಅಂತರದಲ್ಲಿ ಭಾರತ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ನಂತರ ಬಂದ ಇಶಾನ್ ಕಿಶನ್ 18 ರನ್ ( 26 ಎಸೆತ, 2 ಬೌಂಡರಿ) ಹೊಡೆದು ವಿಕೆಟ್ ಒಪ್ಪಿಸಿದರು. ಐದನೇ ವಿಕೆಟಿಗೆ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ 85 ಎಸೆತಗಳಲ್ಲಿ 80 ರನ್ ಜೊತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ಹತ್ತಿರ ತಂದರು.
47 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಸೂರ್ಯಕುಮಾರ್ ಯಾದವ್ (Surya Kumar Yadav) ಸಿಕ್ಸ್ ಹೊಡೆಯಲು ಹೋಗಿ ವಿಕೆಟ್ ಒಪ್ಪಿಸಿದರು. ಹೀಗಿದ್ದರೂ ನಾಯಕನ ಜವಾಬ್ದಾರಿ ನಿಬಾಯಿಸಿದ ರಾಹುಲ್ (KL Rahul) ಕೊನೆಗೆ ಬೌಂಡರಿ, ಸಿಕ್ಸರ್ ಹೊಡೆದು ತಂಡವನ್ನು ಗೆಲ್ಲಿಸಿಕೊಟ್ಟರು. ರಾಹುಲ್ ಔಟಾಗದೇ 58 ರನ್(63 ಎಸೆತ, 4 ಬೌಂಡರಿ, 1 ಸಿಕ್ಸರ್) ಹೊಡೆದರು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ತ್ರೇಲಿಯಾ ಆರಂಭದಲ್ಲೇ ಮಿಶೆಲ್ ಮಾರ್ಶ್ ವಿಕೆಟ್ ಕಳೆದುಕೊಂಡರೂ ಎರಡನೇ ವಿಕೆಟಿಗೆ ಡೇವಿಡ್ ವಾರ್ನರ್ ಮತ್ತು ಸ್ವೀವನ್ ಸ್ಮಿತ್ 106 ಎಸೆತಗಳಲ್ಲಿ 94 ರನ್ ಜೊತೆಯಾಟವಾಡುವ ಮೂಲಕ ಚೇತರಿಕೆ ನೀಡಿದರು.
ಡೇವಿಡ್ ವಾರ್ನರ್ 52 ರನ್(53 ಎಸೆತ, 6 ಬೌಂಡರಿ, 2 ಸಿಕ್ಸರ್), ಸ್ಮಿತ್ 41 ರನ್(60 ಎಸೆತ, 3 ಬೌಂಡರಿ, 1 ಸಿಕ್ಸರ್), ಜೋಶ್ ಇಂಗ್ಲೀಸ್ 45 ರನ್ (45 ಎಸೆತ, 3 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರೆ ನಾಯಕ ಪ್ಯಾಟ್ ಕಮ್ಮಿನ್ಸ್ ಔಟಾಗದೇ 21 ರನ್ (9 ಎಸೆತ, 2 ಬೌಂಡರಿ, 1 ಸಿಕ್ಸರ್) ಹೊಡೆದರು. ಅಂತಿಮವಾಗಿ ಆಸ್ಟ್ರೇಲಿಯಾ 276 ರನ್ಗಳಿಗೆ ಆಲೌಟ್ ಆಯ್ತು. ಮೊಹಮ್ಮದ್ ಶಮಿ 5 ವಿಕೆಟ್ ಪಡೆದರೆ ಬುಮ್ರಾ ಅಶ್ವಿನ್, ರವೀಂದ್ರ ಜಡೆಜಾ ತಲಾ ಒಂದೊಂದು ವಿಕೆಟ್ ಪಡೆದರು. 5 ವಿಕೆಟ್ ಪಡೆದ ಶಮಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.