ವಾಷಿಂಗ್ಟನ್: ಫೆಡ್ಎಕ್ಸ್ ಕಂಪನಿ ಸಿಇಒ, ಭಾರತೀಯ ಮೂಲದ ಅಮೆರಿಕ ಉದ್ಯಮಿ ರಾಜ್ ಸುಬ್ರಹ್ಮಣಿಯಮ್ಗೆ ಪ್ರತಿಷ್ಠಿತ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ವಿದೇಶದಲ್ಲಿ ನೆಲೆಸಿರುವ ಭಾರತೀಯ ಮೂಲದ ವ್ಯಕ್ತಿಗಳಿಗೆ ಕೇಂದ್ರ ಸರ್ಕಾರ ನೀಡುವ ಅತ್ಯುನ್ನತ ಪ್ರಶಸ್ತಿ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿಯಾಗಿದ್ದು ಈ ಭಾರಿ ಪ್ರಶಸ್ತಿಗೆ ಸುಬ್ರಹ್ಮಣಿಯಮ್ ಆಯ್ಕೆಯಾಗಿದ್ದಾರೆ.
ಸುಬ್ರಹ್ಮಣಿಯಮ್ ಅವರಿಗೆ ಅಮೆರಿಕದಲ್ಲಿನ ಇಂಡಿಯಾ ಹೌಸ್ನಲ್ಲಿ ಭಾರತದ ಅಮೆರಿಕ ರಾಯಭಾರಿ ತರಣ್ಜಿತ್ ಸಿಂಗ್ ಸಂಧು ಪ್ರಶಸ್ತಿಯನ್ನು ಹಸ್ತಾಂತರಿಸಿದರು. ಈ ವರ್ಷಾರಂಭದಲ್ಲೇ ಸುಬ್ರಹ್ಮಣಿಯಮ್ ಈ ಗೌರವವನ್ನು ಭಾರತಕ್ಕೆ ಬಂದು ಪಡೆದುಕೊಳ್ಳಬೇಕಾಗಿತ್ತಾದರೂ, ಅದು ಸಾಧ್ಯವಾಗಿರಲಿಲ್ಲ. ಹೀಗಾಗಿ ಅಮೆರಿಕದಲ್ಲಿನ ಇಂಡಿಯಾ ಹೌಸ್ನಲ್ಲಿ ಇದೀಗ ಪ್ರಶಸ್ತಿಯನ್ನು ನೀಡಲಾಗಿದೆ. ಈ ವೇಳೆ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಹಾಜರಿದ್ದರು.