ವಾಷಿಂಗ್ಟನ್: ಭಾರತೀಯ-ಅಮೆರಿಕನ್ ಟೆಕ್ ಉದ್ಯಮಿ ವಿವೇಕ್ ರಾಮಸ್ವಾಮಿ 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ನಿಕ್ಕಿ ಹ್ಯಾಲೆ ನಂತರ ರಿಪಬ್ಲಿಕನ್ ಪಕ್ಷದ ಅಧ್ಯಕ್ಷರಾಗಿ ಸ್ಪರ್ಧಿಸಲು ಮುಂದಾಗಿರುವ 2ನೇ ಭಾರತೀಯ-ಅಮೆರಿಕನ್ ವಿವೇಕ್ ರಾಮಸ್ವಾಮಿ ಆಗಿದ್ದಾರೆ.
ಈ ತಿಂಗಳ ಆರಂಭದಲ್ಲಿ, ದಕ್ಷಿಣ ಕೆರೊಲಿನಾದ ಎರಡು ಅವಧಿಯ ಮಾಜಿ ಗವರ್ನರ್ ಮತ್ತು ವಿಶ್ವಸಂಸ್ಥೆಯ ಮಾಜಿ ಯುಎಸ್ ರಾಯಭಾರಿ, ಹ್ಯಾಲೆ ತನ್ನ ಅಧ್ಯಕ್ಷೀಯ ಪ್ರಚಾರವನ್ನು ಘೋಷಿಸಿದರು. ರಿಪಬ್ಲಿಕನ್ ಪಕ್ಷದ ನಾಮನಿರ್ದೇಶನಕ್ಕಾಗಿ ತನ್ನ ಮಾಜಿ ಬಾಸ್ ಮತ್ತು ಮಾಜಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಸ್ಪರ್ಧಿಸುವುದಾಗಿ ವಿವೇಕ್ ರಾಮಸ್ವಾಮಿ ಘೋಷಿಸಿದರು.