ರಾಯಚೂರು:– ಪೌರತ್ವ ತಿದ್ದುಪಡಿ ಕಾಯ್ದೆಯಡಿ ಕರ್ನಾಟಕದಲ್ಲಿದ್ದ ಐವರು ಬಾಂಗ್ಲಾ ನಿರಾಶ್ರಿತರಿಗೆ ಭಾರತೀಯ ಪೌರತ್ವ ನೀಡಲಾಗಿದೆ.
ಸಿಂಧನೂರು ತಾಲೂಕಿನ ಆರ್.ಎಚ್ ಕ್ಯಾಂಪ್ಗಳಲ್ಲಿ ವಾಸವಿರುವ ಐವರಿಗೆ ಭಾರತೀಯ ಪೌರತ್ವ ಸಿಕ್ಕಿದೆ.
ಆರ್.ಎಚ್ಕ್ಯಾಂಪ್ಗಳಲ್ಲಿರುವ ರಾಮಕೃಷ್ಣನ್ ಅಭಿಕರಿ, ಸುಕುಮಾರ ಮೊಂಡಲ್, ಬಿ. ಪ್ರದಾಸ ಗೋಲ್ದರ್, ಜಯಂತ ಮೊಂಡಲ್, ಅದ್ವಿತ ಕೇಂದ್ರ ಗೃಹ ಇಲಾಖೆಯಿಂದ ಪೌರತ್ವ ಪಡೆದ ಬಾಂಗ್ಲಾ ವಲಸಿಗರಾಗಿದ್ದಾರೆ. ಜನಗಣತಿ ಕಾರ್ಯಾಚರಣೆ ಹಾಗೂ ನಾಗರಿಕ ನೋಂದಣಿ ನಿರ್ದೇಶನಾಲಯದಿಂದ ಅಧಿಕೃತವಾಗಿ ಪೌರತ್ವ ಪತ್ರ ಪಡೆದುಕೊಂಡಿದ್ದಾರೆ.
1971ರ ಬಾಂಗ್ಲಾದೇಶ ವಿಮೋಚನಾ ವೇಳೆ ಬಾಂಗ್ಲಾ ಹಾಗೂ ಬರ್ಮಾ ವಲಸಿಗರಿಗೆ ಭಾರತದಲ್ಲಿ ಆಶ್ರಯ ನೀಡಲಾಗಿತ್ತು. ಈ ವೇಳೆ ಸಿಂಧನೂರು ತಾಲೂಕಿನಲ್ಲಿ ಸುಮಾರು 932 ಕುಟುಂಬಗಳಿಗೆ 5 ಸಾವಿರ ಎಕರೆ ಜಮೀನು ನೀಡಲಾಗಿತ್ತು.