ಕಠ್ಮಂಡು: ಜಗತ್ತಿನ 8ನೇ ಅತೀ ಎತ್ತರದ ಪರ್ವತವಾಗಿರುವ ನೇಪಾಳದ ಅನ್ನಪೂರ್ಣ ಪರ್ವತದಲ್ಲಿ ನಾಪತ್ತೆಯಾಗಿದ್ದ ಭಾರತೀಯ ಮೂಲದ ಪರ್ವತಾರೋಹಿ ಬಲಜೀತ್ ಕೌರ್ ಜೀವಂತವಾಗಿ ಪತ್ತೆಯಾಗಿದ್ದಾರೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅತ್ಯಂತ ಕ್ಲಿಷ್ಠಕರ ಪರ್ವತಾರೋಹಣಗಳ ಪೈಕಿ ಒಂದಾಗಿರುವ ಅನ್ನಪೂರ್ಣ ಪರ್ವತ ಶಿಖರದ ಶೃಂಗ ತಲುಪಿದ ಬಳಿಕ 4ನೇ ಶಿಬಿರಕ್ಕೆ ವಾಪಸ್ ಆಗುವ ವೇಳೆ ಬಲಜೀತ್ ಕೌರ್ ನಾಪತ್ತೆಯಾಗಿದ್ದರು.
ರೆಡಿಯೋ ಸಿಗ್ನಲ್ ಕೂಡ ಕಡಿತಗೊಂಡಿದ್ದರಿಂದ ಅವರ ಹುಡುಕಾಟ ಕಷ್ಟ ಸಾಧ್ಯವಾಗಿತ್ತು. ಸಿಗ್ನಲ್ ಪತ್ತೆಯಾದ ಬಳಿಕ ಕೌರ್, ಸಹಾಯ ಕೋರಿದರು, ತಕ್ಷಣ ಅವರನ್ನು ಏರ್ಲಿಫ್ಟ್ ಮಾಡಲು ವಿಮಾನಗಳು ಧಾವಿಸಿ ಅವರನ್ನು ರಕ್ಷಿಸಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.