ವಿಶ್ವಕಪ್ನಲ್ಲಿ ಭಾರತದ ಮುಸ್ಲಿಂ ನಮ್ಮನ್ನು ಬೆಂಬಲಿಸುತ್ತಾರೆ ಎಂದು ಪಾಕ್ ಮಾಜಿ ವೇಗಿ ರಾಣಾ ನವೀದ್ ಉಲ್ ಹಸನ್ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಏಕದಿನ ವಿಶ್ವಕಪ್ನಲ್ಲಿ ಅಕ್ಟೋಬರ್ 15ರಂದು ಅಹಮದಾಬಾದ್ನಲ್ಲಿ ನಡೆಯಲಿರುವ ಭಾರತ-ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯದಲ್ಲಿ ಭಾರತದ ಮುಸ್ಲಿಮರು ಪಾಕಿಸ್ತಾನ ತಂಡವನ್ನು ಬೆಂಬಲಿಸಲಿದ್ದಾರೆ ಎಂದು ಯೂಟ್ಯೂಬ್ ಪಾಡ್ಕಾಸ್ಟ್ನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರಾಣಾ ನವೇದ್ ಉಲ್ ಹಸನ್ ಪಾಕಿಸ್ತಾನ ಪರ ಒಟ್ಟಾರೆ 18 ಪಂದ್ಯಗಳನ್ನು ಆಡಿದ್ದಾರೆ.
ವಿಶ್ವಕಪ್ನಲ್ಲಿ 1.30 ಲಕ್ಷ ಪ್ರೇಕ್ಷಕರ ಸಾಮರ್ಥ್ಯದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ&ಪಾಕಿಸ್ತಾನ ನಡುವಿನ ಪಂದ್ಯ ನಡೆಯಲಿದೆ. ಇದು ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿದೆ. ಭಾರತ&ಪಾಕ್ ಪಂದ್ಯದ ಬಗ್ಗೆ ಮಾತನಾಡಿರುವ 45 ವರ್ಷದ ನವೀದ್ ಉಲ್ ಹಸನ್, ‘ಭಾರತದಲ್ಲಿ ಪಂದ್ಯಗಳು ನಡೆಯುವಾಗ ಯಾವಾಗಲೂ ಖಂಡಿತವಾಗಿಯೇ ಭಾರತವೇ ಫೇವರಿಟ್ ಆಗಿರುತ್ತದೆ. ಆದರೆ ಪಾಕಿಸ್ತಾನ ತಂಡವೂ ಉತ್ತಮವಿದೆ ಮತ್ತು ಉತ್ತಮ ಪಂದ್ಯ ನಡೆಯಲಿದೆ. ಪ್ರೇಕ್ಷಕರ ವಿಷಯಕ್ಕೆ ಬಂದರೆ, ಭಾರತದಲ್ಲಿರುವ ಮುಸ್ಲಿಮರು ನಮ್ಮ ತಂಡಕ್ಕೆ ಬೆಂಬಲವನ್ನು ನೀಡಲಿದ್ದಾರೆ. ನಾನು ಭಾರತದ ಅಹಮದಾಬಾದ್ ಮತ್ತು ಹೈದರಾಬಾದ್ನಲ್ಲಿ 2 ಸರಣಿಗಳನ್ನು ಆಡಿರುವ ಅನುಭವದ ಆಧಾರದಲ್ಲಿ ಈ ಮಾತನ್ನು ಹೇಳುತ್ತಿದ್ದೇನೆ’ ಎಂದು ಹೇಳಿದ್ದಾರೆ.