ಡಿಸೆಂಬರ್ 4 ರಂದು ಭಾರತದಲ್ಲಿ ನೌಕಾಪಡೆ ದಿನ ಎಂದು ಆಚರಿಸಲಾಗುತ್ತದೆ. ಸದ್ಯದ ಗಡಿ ಬಿಕ್ಕಟ್ಟು ಹಾಗೂ ದೇಶಗಳ ನಡುವಿನ ವೈಷಮ್ಯಗಳನ್ನು ಗಮನಿಸಿದರೆ ಪ್ರಸ್ತುತ ನೌಕಪಡೆ ಒಂದು ದೇಶಕ್ಕೆ ಬಹಳ ಮುಖ್ಯವಾದ ರಕ್ಷಣಾ ಪಡೆಯಾಗಿದೆ. ಭಾರತ ಕೂಡ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ, ಸದೃಢ ನೌಕಾಪಡೆಯನ್ನು ಭಾರತ ಹೊಂದಿದೆ. ಭಾರತ ವಾಣಿಜ್ಯ ವಹಿವಾಟಿಗೆ ಸಂಬಂಧಪಟ್ಟಂತೆ ಸಮುದ್ರಗಳನ್ನು ತನ್ನ ತೆಕ್ಕೆಯಲ್ಲಿ ಇರಿಸಿಕೊಂಡಿರುವುದರಿಂದ ಭಾರತಕ್ಕೆ ನೌಕಾಪಡೆ ಅತೀ ಮುಖ್ಯವಾಗಿದೆ. ಹೀಗಾಗಿ ಹೈದರಾಬಾದ್, ಕಾರವಾರ ಸೇರಿ ಕೆಲವೆಡೆ ನೌಕಾ ನೆಲಗಳನ್ನು ಸ್ಥಾಪಿಸಿದೆ.
ಭಾರತೀಯ ನೌಕಾಪಡೆಯ ದಿನದ ಇತಿಹಾಸ:ಭಾರತೀಯ ನೌಕಾಪಡೆಯನ್ನು 1612 ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಸ್ಥಾಪಿಸಿತು. 1971 ರಲ್ಲಿ ಭಾರತ-ಪಾಕ್ ಯುದ್ಧದ ಸಮಯದಲ್ಲಿ, ಪಾಕಿಸ್ತಾನವು ಡಿಸೆಂಬರ್ 3 ರಂದು ಭಾರತೀಯ ವಾಯು ನೆಲೆಗಳ ಮೇಲೆ ದಾಳಿ ನಡೆಸಿತು. ಅವರ ಆಕ್ರಮಣಕಾರಿ ದಾಳಿಗಳಿಗೆ ಪ್ರತಿಕ್ರಿಯೆಯಾಗಿ, ಭಾರತೀಯ ನೌಕಾಪಡೆಯು ಡಿಸೆಂಬರ್ 4 ಮತ್ತು 5 ರ ರಾತ್ರಿ ದಾಳಿಯನ್ನು ಯೋಜಿಸಿತು. ಆ ಸಮಯದಲ್ಲಿ ಬಾಂಬ್ ಸ್ಫೋಟಗಳನ್ನು ನಡೆಸಲು ಪಾಕಿಸ್ತಾನವು ವಿಮಾನವನ್ನು ಹೊಂದಿರಲ್ಲಿಲ್ಲ. ಆಪರೇಷನ್ ಟ್ರೈಡೆಂಟ್ ಸಮಯದಲ್ಲಿ ಭಾರತೀಯ ನೌಕಾಪಡೆಯು ಕರಾಚಿಯ ಪಾಕಿಸ್ತಾನ ನೌಕಾಪಡೆಯ ಪ್ರಧಾನ ಕಛೇರಿಯನ್ನು ಗುರಿಯಾಗಿಸಿಕೊಂಡಿತು.
ಇದು ಮೂರು ಕ್ಷಿಪಣಿ ದೋಣಿಗಳಾದ INS ವೀರ್, INS ನಿಪತ್ ಮತ್ತು INS ನಿರ್ಘಾಟ್ ಗಳನ್ನು ಬಳಸಲಾಗಿತ್ತು. ಈ ಯುದ್ದದಲ್ಲಿ ವೈರಿ ಸೈನ್ಯವಾದ ಪಾಕಿಸ್ತಾನಿ ನೌಕಾಪಡೆಯ ಹಡಗುಗಳನ್ನು ಮುಳುಗಿಸಿತು. ಇದರ ಪರಿಣಾಮ ಪಾಕಿಸ್ತಾನಿ ನೌಕಾಪಡೆ ಸಿಬ್ಬಂದಿಗಳು ಸಾವನ್ನಪ್ಪಿದ್ದರು. ಆಪರೇಷನ್ ಟ್ರೈಡೆಂಟ್ ಕಾರ್ಯಾಚರಣೆಯ ಸಂಪೂರ್ಣ ನೇತೃತ್ವವನ್ನು ಕಾಮಾಂಡರ್ ಕಾಸರಗೋಡು ಪಟ್ಟಣಶೆಟ್ಟಿ ಗೋಪಾಲ್ ರಾವ್ ವಹಿಸಿದ್ದರು.ಈ ವಿಜಯದ ಸಂಭ್ರಮವನ್ನು ಇಡೀ ದೇಶದಲ್ಲಿ ಭಾರತೀಯ ನೌಕಾಪಡೆಯ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನದಂದು ನೌಕಾಪಡೆಗೆ ಗೌರವವನ್ನು ಸೂಚಿಸಲಾಗುತ್ತದೆ. ಜೊತೆಗೆ ನೌಕಾ ಪಡೆಯ ಸೈನಿಕರು ತಮ್ಮ ಜೀವದ ಹಂಗನ್ನು ತೊರೆದು, ದೇಶಕ್ಕಾಗಿ ಅವರು ಪಡುವ ಕಷ್ಟಗಳ ಕುರಿತು ಪ್ರತಿಯೊಬ್ಬರಲ್ಲಿಯೂ ಜಾಗೃತಿ ಮೂಡಿಸುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ.
ಭಾರತೀಯ ನೌಕಾಪಡೆಯ ದಿನದ ಮಹತ್ವ:
ಮೇ 1972 ರಲ್ಲಿ ನಡೆದ ಹಿರಿಯ ನೌಕಾ ಅಧಿಕಾರಿಗಳ ಸಮ್ಮೇಳನದಲ್ಲಿ, 1971 ರ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ಭಾರತೀಯ ನೌಕಾಪಡೆಯ ಪ್ರಯತ್ನಗಳು ಮತ್ತು ಸಾಧನೆಗಳನ್ನು ಗುರುತಿಸಲು ಡಿಸೆಂಬರ್ 4 ರಂದು ಭಾರತೀಯ ನೌಕಾಪಡೆಯ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ಭಾರತದ ಮಹತ್ವ ಮತ್ತು ವಿಜಯದ ಬಗ್ಗೆ ಯುವ ಪೀಳಿಗೆಗೆ ಮತ್ತು ಭಾರತದ ನಾಗರಿಕರಿಗೆ ಅರಿವು ಮೂಡಿಸುವ ಮಹತ್ವವನ್ನು ಹೊಂದಿದೆ. ಪ್ರತಿ ವರ್ಷವು ನೌಕಾ ಉತ್ಸವದಲ್ಲಿ ಭಾರತೀಯ ನೌಕಾಪಡೆಯ ಯುದ್ಧನೌಕೆಗಳು ಮತ್ತು ವಿಮಾನಗಳನ್ನು ನೋಡುವ ಅವಕಾಶವನ್ನು ಸಾರ್ವಜನಿಕರಿಗೆ ನೀಡಲಾಗುತ್ತದೆ. ಅಲ್ಲದೆ, ಉತ್ಸವದಲ್ಲಿ ಎರ್ನಾಕುಲಂನ ಪತ್ರಕರ್ತರಿಂದ ಮಿಲಿಟರಿ ಫೋಟೋ ಪ್ರದರ್ಶನವನ್ನು ಆಯೋಜಿಸಲಾಗಿದೆ.
ಭಾರತೀಯ ನೌಕಾಪಡೆಯ ದಿನವನ್ನು ಹೇಗೆ ಆಚರಿಸಲಾಗುತ್ತದೆ?
ಡಿಸೆಂಬರ್ 4 ರಂದು ಪಾಕಿಸ್ತಾನದ ನೌಕಾ ನೆಲೆಯ ಮೇಲೆ ನಡೆದ ವಿಧ್ವಂಸಕ ದಾಳಿಯ ಸ್ಮರಣಾರ್ಥವಾಗಿ, ಮುಂಬೈನಲ್ಲಿ ಪ್ರಧಾನ ಕಚೇರಿಯಲ್ಲಿ ಭಾರತೀಯ ನೌಕಾಪಡೆಯ ಪಶ್ಚಿಮ ನೌಕಾ ಕಮಾಂಡ್, ತಮ್ಮ ಹಡಗುಗಳು ಮತ್ತು ಸೈನಿಕರನ್ನು ಒಟ್ಟಿಗೆ ಸೇರಿಸುವ ಮೂಲಕ ಈ ದಿನವನ್ನು ಆಚರಿಸುತ್ತದೆ. ಅಲ್ಲದೆ, ವಿಶಾಖಪಟ್ಟಣಂನಲ್ಲಿ ಪೂರ್ವ ನೌಕಾ ಕಮಾಂಡ್ನಿಂದ ವಿವಿಧ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇದು ಯುದ್ಧ ಸ್ಮಾರಕದಲ್ಲಿ ಪುಷ್ಪಾರ್ಚನೆ ಸಮಾರಂಭದೊಂದಿಗೆ ಪ್ರಾರಂಭವಾಗಿ ನೌಕಾ ಜಲಾಂತರ್ಗಾಮಿ ನೌಕೆಗಳು, ಹಡಗುಗಳು, ವಿಮಾನಗಳು ಮತ್ತು ಇತರ ಪಡೆಗಳ ಕೌಶಲ್ಯಗಳನ್ನು ತೋರಿಸಲು ಪ್ರದರ್ಶನವನ್ನು ಸಾರ್ವಜನಿಕರಾಗಿ ಆಯೋಜಿಸಲಾಗುತ್ತದೆ.
ಭಾರತೀಯ ನೌಕಾಪಡೆಯು ದೇಶದ ಸಮುದ್ರ ಗಡಿಗಳನ್ನು ಭದ್ರಪಡಿಸುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ ಮತ್ತು ಬಂದರು ಭೇಟಿಗಳು, ಹೂಡಿಕೆಗಳು, ವಿಪತ್ತು ಪರಿಹಾರ ಮತ್ತು ಹೆಚ್ಚಿನವುಗಳ ಮೂಲಕ ಭಾರತದಲ್ಲಿ ಅಂತರರಾಷ್ಟ್ರೀಯ ಸಂಬಂಧಗಳನ್ನು ಸುಧಾರಿಸುತ್ತದೆ. ಭಾರತೀಯ ನೌಕಾಪಡೆಯ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸಲು ಗೇಟ್ವೇ ಆಫ್ ಇಂಡಿಯಾದಲ್ಲಿ ಹಲವಾರು ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಈ ವಿಶೇಷ ದಿನವನ್ನು ಆಚರಿಸಲಾಗುತ್ತದೆ.