ವಾಷಿಂಗ್ಟನ್: ನ್ಯೂಯಾರ್ಕ್ ಪೊಲೀಸ್ ಇಲಾಖೆಯ ಕ್ಯಾಪ್ಟನ್ ಆಗಿ ಇತ್ತೀಚೆಗಷ್ಟೇ ಬಡ್ತಿ ಪಡೆದು ಸುದ್ದಿಯಾಗಿದ್ದ ಭಾರತ ಮೂಲದ ಪೊಲೀಸ್ ಅಧಿಕಾರಿ, ಕ್ಯಾಪ್ಟನ್ ಪ್ರತಿಮಾ ಭುಲ್ಲಾರ್ ಮಲ್ಡೊನಾಡೋ, ಎನ್ವೈಡಿಪಿಯಲ್ಲಿ ಅತ್ಯುನ್ನತ ಹುದ್ದೆಪಡೆದ ದಕ್ಷಿಣ ಏಷ್ಯಾದ ಮೊದಲ ಮಹಿಳೆಯೆಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಮೂಲ ಪಂಜಾಬ್ ಪ್ರತಿಮಾ ಅವರನ್ನು ಕಳೆದ ತಿಂಗಳಷ್ಟೇ ಕ್ಯಾಪ್ಟನ್ ಹುದ್ದೆಗೆ ಬಡ್ತಿಯನ್ನು ಘೋಷಿಸಲಾಗಿತ್ತು. ನ್ಯೂಯಾರ್ಕ್ನಲ್ಲಿ ಸಿಖ್ ಸಮುದಾಯ ಹೆಚ್ಚಾಗಿರುವ ಪ್ರದೇಶದಲ್ಲೇ ಅವರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಈ ಮೂಲಕ ಸೌತ್ ರಿಚ¾ಂಡ್ಹಿಲ್ನ 102ನೇ ಪೊಲೀಸ್ ತುಕಡಿಯನ್ನು ಪ್ರತಿಮಾ ಮುನ್ನಡೆಸಲಿದ್ದಾರೆ.