ತೆಲಂಗಾಣದ ಹೈದರಾಬಾದ್ ಮೂಲದ ಶ್ವೇತಾ ಮಧಗಾನಿ ಎಂಬ ಮಹಿಳೆಯ ಶವ ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯ ಪತ್ತೆಯಾಗಿದೆ. ಈಕೆಯನ್ನು ದುಷ್ಕರ್ಮಿಗಳು ಕೊಲೆ ಮಾಡಿ ರಸ್ತೆ ಬದಿಯಲ್ಲಿ ಎಸೆದು ಹೋಗಿದ್ದು ಆಕೆಯ ಪತಿಯ ಮೇಲೆ ಅನುಮಾನ ಮೂಡಿದೆ.
ಶ್ವೇತಾ ಮಧಗಾನಿ ಶವ ಶನಿವಾರ (ಮಾರ್ಚ್ 9) ಬಕ್ಲಿಯಲ್ಲಿ ರಸ್ತೆ ಬದಿಯ ತೊಟ್ಟಿಯಲ್ಲಿ ಪತ್ತೆಯಾಗಿದೆ, ಕೊಲೆಯಲ್ಲಿ ಆಕೆಯ ಪತಿ ಅಶೋಕ್ ರಾಜ್ ಭಾಗಿಯಾಗಿರಬಹುದೆಂದು ಶಂಕಿಸಲಾಗಿದೆ. ಕೊಲೆಯ ನಂತರ ಅಶೋಕ್ ತಮ್ಮ ಮೂರು ವರ್ಷದ ಮಗನೊಂದಿಗೆ ಭಾರತಕ್ಕೆ ತೆರಳಿದ್ದಾರೆ ಎಂದು ವರದಿಯಾಗಿದೆ.