ಒಟ್ಟಾವ: ವಿದೇಶಗಳಲ್ಲಿ ಜನಾಂಗೀಯ ದ್ವೇಷ ಮತ್ತೆ ಮರುಕಳಿಸಿದೆ. ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ಭಾರತದ ಸಿಖ್ ವಿದ್ಯಾರ್ಥಿಯ ಮೇಲೆ ಅಪರಿಚಿತ ವ್ಯಕ್ತಿಗಳ ಗುಂಪು ಶುಕ್ರವಾರ ಹಲ್ಲೆ ನಡೆಸಿದೆ.
ಗಗನ್ದೀಪ್ ಸಿಂಗ್ (21) ಹಲ್ಲೆಗೊಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ರಾತ್ರಿ ಅಂಗಡಿಯೊಂದಕ್ಕೆ ತೆರಳಿದ್ದ ಗಗನ್ದೀಪ್ ಸಿಂಗ್ ರಾತ್ರಿ 10.30ರ ವೇಳೆಗೆ ಬಸ್ನಲ್ಲಿ ಬರುತ್ತಿದ್ದ. ಈ ಸಂದರ್ಭದಲ್ಲಿ 10 ರಿಂದ 15 ಜನರ ಗುಂಪು ಆತನ ಮೇಲೆ ಹಲ್ಲೆ ನಡೆಸಿದೆ ಎಂದು ಕೌನ್ಸಿಲರ್ ಮೋಹಿನಿ ಸಿಂಗ್ ತಿಳಿಸಿದ್ದಾರೆ.
ಆತನನ್ನು ಹಿಂಬಾಲಿಸಿ ಧರಿಸದ್ದ ಪೇಟವನ್ನು ಕಿತ್ತೆಸೆದಿದ್ದಾರೆ. ಆತನ ಕಾಲು, ಕೈ ಹಾಗೂ ಪಕ್ಕೆಲುಬುಗಳಿಗೆ ಒದ್ದು, ತಲೆಕೂದಲನ್ನು ಹಿಡಿದೆಳೆದು ರಸ್ತೆ ಬದಿಗೆ ತಳ್ಳಿದ್ದಾರೆ ಎಂದು ಕೌನ್ಸಿಲರ್ ತಿಳಿಸಿದ್ದಾರೆ.
ನಂತರ ಆತನ ಸ್ನೇಹಿತರು ಸ್ಥಳಕ್ಕೆ ಬಂದು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಭಾರತೀಯರು ಎಂಬ ಒಂದೇ ಕಾರಣದಿಂದ ಹಲ್ಲೆ ನಡೆದಿದೆ ಎಂದು ಕೌನ್ಸಿಲರ್ ದೂರುದ್ದಾರೆ.