ಹ್ಯಾಂಗ್ಝೌ: ಏಷ್ಯನ್ ಗೇಮ್ಸ್ನಲ್ಲಿ (Asian Games 2023) 9ನೇ ದಿನವಾದ ಸೋಮವಾರವೂ ಭಾರತೀಯರ ಕ್ರೀಡಾಪಟುಗಳ ಪಾರುಪತ್ಯ ಮುಂದುವರಿದಿದ್ದು, ಅಥ್ಲೆಟಿಕ್ಸ್ (Athletics) ವಿಭಾಗದಲ್ಲೂ ಪದಕಗಳ ಬೇಟೆಯಾಡಿದ್ದಾರೆ.
ಮಹಿಳೆಯರ 3000 ಮೀ. ಸ್ಟೀಪಲ್ ಚೇಸ್ನಲ್ಲಿ ಭಾರತದ ಅಥ್ಲಿಟ್ ಪಾರುಲ್ ಚೌಧರಿ (Parul Chaudhary) ಬೆಳ್ಳಿ ಪದಕ ಗೆದ್ದರೆ, ಪ್ರೀತಿ ಲಾಂಬಾ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಆದ್ರೆ ಟೇಬಲ್ ಟೆನ್ನಿಸ್ ಮಹಿಳೆಯರ ಡಬಲ್ಸ್ ಸೆಮಿ ಫೈನಲ್ನಲ್ಲಿ ಸುತೀರ್ಥ ಮುಖರ್ಜಿ-ಆಯ್ಹಿಕಾ ಮುಖರ್ಜಿ ಜೋಡಿ ಸೋತು ನಿರಾಸೆ ಮೂಡಿಸಿದೆ.
ಇನ್ನೂ ಭಾರತ ಪುರುಷರ ಹಾಕಿ ತಂಡವು (Mend Hockey Team) ತನ್ನ ಕೊನೆಯ ಪೂಲ್ ಎ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 12-0 ಅಂತರದಲ್ಲಿ ಜಯಗಳಿಸಿ ಸೆಮಿಫೈನಲ್ ಪ್ರವೇಶಿಸಿದ್ದು, ಚಿನ್ನ ಗೆಲ್ಲುವ ವಿಶ್ವಾಸ ಮೂಡಿಸಿದೆ.
ಈಗಾಗಲೇ ಒಟ್ಟು 261 ಪದಕಗಳನ್ನು (142 ಚಿನ್ನ, 79 ಬೆಳ್ಳಿ, 40 ಕಂಚು) ಗೆದ್ದಿರುವ ಚೀನಾ ಆರಂಭದಿಂದಲೂ ಮೊದಲ ಸ್ಥಾನದಲ್ಲೇ ಮುಂದುವರಿದಿದೆ. 121 ಪದಕಗಳನ್ನು (32 ಚಿನ್ನ, 44 ಬೆಳ್ಳಿ, 45 ಕಂಚು) ಗೆದ್ದಿರುವ ಜಪಾನ್ 2ನೇ ಸ್ಥಾನದಲ್ಲಿದೆ. ರಿಪಬ್ಲಿಕ್ ಕೊರಿಯಾ 132 ಪದಕಗಳನ್ನ (31 ಚಿನ್ನ, 39 ಬೆಳ್ಳಿ, 62 ಕಂಚು) ಗೆದ್ದು 3ನೇ ಸ್ಥಾನದಲ್ಲಿದೆ. ಈವರೆಗೆ ಭಾರತ 13 ಚಿನ್ನ, 22 ಬೆಳ್ಳಿ ಹಾಗೂ 23 ಕಂಚು ಸೇರಿದಂತೆ ಒಟ್ಟು 58 ಪದಕಗಳನ್ನ ಬಾಚಿಕೊಂಡಿರುವ ಭಾರತ 4ನೇ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಇನ್ನೂ 6 ದಿನಗಳು ಬಾಕಿ ಉಳಿದಿದ್ದು, ಎಷ್ಟು ಪದಕಗಳನ್ನು ಬಾಚಿಕೊಳ್ಳಲಿದೆ ಎಂಬುದನ್ನ ಕಾಡು ನೋಡಬೇಕಿದೆ.