ಜಕಾರ್ತ: ತೈಲ ದಾಸ್ತಾನು ಕೇಂದ್ರದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಕನಿಷ್ಠ 19 ಮಂದಿ ಮೃತಪಟ್ಟಿರುವ ಘಟನೆ ಇಂಡೋನೇಷ್ಯಾ ರಾಜಧಾನಿ ಜಕಾರ್ತದ ತನ್ಹಾ ಮೆರಹ್ ಪ್ರದೇಶದ ಪ್ಲುಮ್ಪಾಂಗ್ ತೈಲ ಸಂಗ್ರಹ ಕೇಂದ್ರದಲ್ಲಿ ನಡೆದಿದೆ.
ಸದ್ಯ ಘಟನೆಯಲ್ಲಿ 19 ಮಂದಿ ಸಜೀವ ದಹನವಾಗಿದ್ದು, ಸುಟ್ಟ ಮನೆಗಳು ಹಾಗೂ ಕಟ್ಟಡಗಳ ಅವಶೇಷಗಳಡಿಯಲ್ಲಿ ನಾಪತ್ತೆಯಾಗಿರುವ ಮೂವರಿಗಾಗಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.
ದೇಶದ ಶೇ. 25ರಷ್ಟು ಇಂಧನ ಅಗತ್ಯವನ್ನು ಇದೇ ಕೇಂದ್ರ ಪೂರೈಸುತ್ತಿತ್ತು. ಘಟನೆ ವೇಳೆ ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ಕನಿಷ್ಠ 260 ಅಗ್ನಿಶಾಮಕ ಸಿಬ್ಬಂದಿ ಹಾಗೂ 52 ಅಗ್ನಿಶಾಮಕ ಇಂಜಿನ್ಗಳಿದ್ದವು.
ಪಶ್ಚಿಮ ಜಾವಾ ಪ್ರಾಂತ್ಯದ ಪೆರ್ಟಮಿನಾದ ಬಲೋಂಗನ್ ರಿಫೈನರಿಯಿಂದ ಡಿಪೋ ಇಂಧನವನ್ನು ಪಡೆದಿದ್ದರು. ಇದರಿಂದಾಗಿ ಹೆಚ್ಚಿನ ಒತ್ತಡವಾಗಿ ತಾಂತ್ರಿಕ ಸಮಸ್ಯೆಯಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸದ್ದಾರೆ.