ಪೈನಾಪಲ್ ಜ್ಯೂಸ್ ಅನ್ನು ನೀವೆಲ್ಲರೂ ಸವಿದಿರುತ್ತೀರಿ. ಆದರೆ ಅದೇ ಜ್ಯೂಸ್‌ಗೆ ಮಸಾಲೆಯ ರುಚಿ ನೀಡಿದ್ರೆ! , ನಾಲಿಗೆಗೂ ಮಜವೆನಿಸುವ ಪಾನೀಯವೊಂದನ್ನು ನಾವಿಂದು ನಿಮಗೆ ಹೇಳಿಕೊಡುತ್ತೇವೆ. ಇದೀಗ ಬೇಸಿಗೆ ಹತ್ತಿರವಾಗುತ್ತಿರುವುದರಿಂದ ದಾಹ ತಣಿಸಲು ಈ ಪಾನೀಯ ನಿಮ್ಮ ಸಹಾಯಕ್ಕೂ ಬರುತ್ತದೆ. ಮಸಾಲಾ ಪೈನಾಪಲ್ ಡ್ರಿಂಕ್ (Masala Pineapple Drink) ಹೇಗೆ ಮಾಡಬಹುದು ಎಂಬುದನ್ನು ಇಲ್ಲಿ ನೋಡಿ ತಿಳಿದುಕೊಳ್ಳಿ.
ಬೇಕಾಗುವ ಪದಾರ್ಥಗಳು:
ಮಧ್ಯಮ ಗಾತ್ರದಲ್ಲಿ ಕತ್ತರಿಸಿದ ಅನನಾಸು – ಎರಡೂವರೆ ಕಪ್
ಸಣ್ಣಗೆ ಹೆಚ್ಚಿದ ಅನನಾಸು – ಅರ್ಧ ಕಪ್
ಜೀರಿಗೆ ಪುಡಿ – ಅರ್ಧ ಟೀಸ್ಪೂನ್ಸಕ್ಕರೆ ಪುಡಿ – ಒಂದೂವರೆ ಟೀಸ್ಪೂನ್
ಚಾಟ್ ಮಸಾಲಾ – ಅರ್ಧ ಟೀಸ್ಪೂನ್
ಕಪ್ಪು ಉಪ್ಪು – ಅರ್ಧ ಟೀಸ್ಪೂನ್
ಮಾಡುವ ವಿಧಾನ:
* ಮೊದಲಿಗೆ ಅನನಾಸು ಹಣ್ಣಿನ ತುಂಡುಗಳನ್ನು ಮಿಕ್ಸರ್ ಜಾರ್‌ಗೆ ಹಾಕಿ, 2 ಕಪ್ ತಣ್ಣಗಿನ ನೀರು ಸೇರಿಸಿ, ನುಣ್ಣಗೆ ರುಬ್ಬಿಕೊಳ್ಳಿ.
* ಈಗ ರುಬ್ಬಿದ ಜ್ಯೂಸ್ ಅನ್ನು ಒಂದು ಬೌಲ್‌ಗೆ ಹಾಕಿ, ಅದಕ್ಕೆ ಸಕ್ಕರೆ ಪುಡಿ, ಚಾಟ್ ಮಸಾಲಾ, ಕಪ್ಪು ಉಪ್ಪು ಹಾಗೂ ಜೀರಿಗೆ ಪುಡಿ ಹಾಕಿ, ಎಲಕ್ಕಿ ಮಿಶ್ರಣ ಮಾಡಿ.
* ಅದಕ್ಕೆ ಸಣ್ಣಗೆ ಹೆಚ್ಚಿದ ಅನನಾಸು ತುಂಡುಗಳನ್ನೂ ಸೇರಿಸಿ, ಮಿಶ್ರಣ ಮಾಡಿ.
* ಈಗ ಮಸಾಲಾ ಪೈನಾಪಲ್ ಡ್ರಿಂಕ್ ತಯಾರಾಗಿದ್ದು, ಲೋಟಗಳಿಗೆ ಹಾಕಿ, ತಕ್ಷಣವೇ ಸವಿಯಿರಿ