ಬೆಂಗಳೂರು: ಬಹುಸಂಖ್ಯಾತ ಐಟಿ ಇಂಜಿನಿಯರ್ಗಳಿಗೆ ಇನ್ಫೋಸಿಸ್ ನಲ್ಲಿ ಕೆಲಸಕ್ಕೆ ಸೇರುವುದು ಒಂದು ಕನಸು. ಅದು ನನಸಾಗಬೇಕು ಅಂದ್ರೆ ವಿದ್ಯಾರ್ಹತೆ ಜತೆಗೆ ಇಲ್ಲಿನ ಉದ್ಯೋಗ ಸಂದರ್ಶನದಲ್ಲಿ ಅಭ್ಯರ್ಥಿಗಳು ಪ್ರಾಕ್ಟಿಕಲ್ ಟೆಸ್ಟ್ಗೂ ತಯಾರಿ ಮಾಡಿಕೊಳ್ಳಬೇಕಿರುತ್ತದೆ.
ಅದೇ ರೀತಿ ಬೆಂಗಳೂರು ಮೂಲದ ಐಟಿ ದಿಗ್ಗಜ ಇನ್ಫೋಸಿಸ್ ಅಭ್ಯರ್ಥಿಗಳ ನೇಮಕಾತಿಗೆ ಮುಂದಾಗಿದೆ.
ಏಪ್ರಿಲ್ – ಜೂನ್ನಲ್ಲಿ ನಿವ್ವಳ ಲಾಭವು ಹಿಂದಿನ ಮಾರ್ಚ್ ತ್ರೈಮಾಸಿಕದಲ್ಲಿ ಬಂದಿದ್ದ 7,969 ಕೋಟಿ ರೂ.ಗಳಿಗೆ ಹೋಲಿಸಿದರೆ ಶೇಕಡಾ 20 ರಷ್ಟು ಕುಸಿದಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ, ಕಂಪನಿಯು ಆದಾಯ ಬೆಳವಣಿಗೆಯ ಮಾರ್ಗದರ್ಶನವನ್ನು ಸ್ಥಿರ ಕರೆನ್ಸಿ ಪರಿಭಾಷೆಯಲ್ಲಿ ಈ ಹಿಂದೆ ಯೋಜಿಸಲಾದ ಶೇಕಡಾ 1-3 ರಿಂದ ಶೇಕಡಾ 3-4 ಕ್ಕೆ ಹೆಚ್ಚಿಸಿದೆ. ವರ್ಷದ ಬೆಳವಣಿಗೆಯನ್ನು ಅವಲಂಬಿಸಿ 15,000 ದಿಂದ 20,000 ಫ್ರೆಶರ್ ಗಳನ್ನು ನೇಮಿಸಿಕೊಳ್ಳಲು ಕಂಪನಿ ಯೋಜಿಸಿದೆ.
2024-25ನೇ ಸಾಲಿನ ಏಪ್ರಿಲ್ನಿಂದ ಜೂನ್ವರೆಗಿನ ತ್ರೈಮಾಸಿಕದಲ್ಲಿ ನಾವು ಲಾಭಾಂಶದಲ್ಲಿ ಅದ್ಭುತ ಲಾಭವನ್ನ ಪಡೆಯುವ ಮೂಲಕ ಈ ವರ್ಷ ಉತ್ತಮ ಆರಂಭವನ್ನ ಹೊಂದಿದ್ದೇವೆ. ಸದೃಢವಾದ ಬೆಳವಣಿಗೆ, ಆಪರೇಟಿಂಗ್ ಮಾರ್ಜಿನ್ ವಿಸ್ತರಣೆ ಮತ್ತಿತರ ಕಾರಣಗಳಿಂದ ನಾವಿಂದು ನಿರೀಕ್ಷೆಗೂ ಮೀರಿ ಲಾಭ ಪಡೆದಿದ್ದೇವೆ. ನನ್ನ ವಿವಿಧ ರೂಪದ ಸೇವೆಗಳು, ಕ್ಲೈಂಟ್ಗಳು ನಮ್ಮ ಮೇಲೆ ಇಟ್ಟ ನಂಬಿಕೆಯೂ ಇದಕ್ಕೆ ಕಾರಣ ಎಂದು ಸಿಇಒ ಮತ್ತು ಎಂಡಿ ಆಗಿರುವ ಸಲೀಲ್ ಪರೇಖ್ ಹೇಳಿದ್ದಾರೆ.
ಹಿಂದಿನ ತ್ರೈಮಾಸಿಕಗಳಿಗಿಂತ ಕಡಿಮೆಯಾಗಿದೆ. ನಮ್ಮ ಬಳಕೆಯು ಈಗಾಗಲೇ ಶೇಕಡ 85 ರಷ್ಟಿದೆ, ಆದ್ದರಿಂದ ನಾವು ಬೆಳವಣಿಗೆಯನ್ನು ನೋಡಲು ಪ್ರಾರಂಭಿಸಿದಾಗ ನೇಮಕಕ್ಕೆ ಒತ್ತು ನೀಡುತ್ತೇವೆ ಎಂದಿದ್ದಾರೆ. ನಾವು ಬೆಳವಣಿಗೆಯನ್ನು ಹೇಗೆ ನೋಡುತ್ತೇವೆ ಎಂಬುದರ ಆಧಾರದ ಮೇಲೆ ಈ ವರ್ಷ 15,000-20,000 ಫ್ರೆಶರ್ಗಳನ್ನು ನೇಮಿಸಿಕೊಳ್ಳಲು ಎದುರು ನೋಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಕಂಪನಿಯು ತ್ರೈಮಾಸಿಕದಲ್ಲಿ 4.1 ಬಿಲಿಯನ್ ಡಾಲರ್ ಮೌಲ್ಯದ ದೊಡ್ಡ ಒಪ್ಪಂದಗಳನ್ನು ಪಡೆದುಕೊಂಡಿದೆ. ಇನ್ಫೋಸಿಸ್ನ ಆದಾಯಕ್ಕೆ ಅತಿದೊಡ್ಡ ಕೊಡುಗೆ ನೀಡುವ ಹಣಕಾಸು ಸೇವೆಗಳ ವಿಭಾಗದ ಪಾಲು ಸ್ಥಿರ ಕರೆನ್ಸಿ ಆಧಾರದ ಮೇಲೆ ಶೇಕಡಾ 0.3 ರಷ್ಟು ಕುಸಿತವನ್ನು ದಾಖಲಿಸಿದೆ. ಚಿಲ್ಲರೆ ವಿಭಾಗದ ಪಾಲು ಶೇಕಡಾ 3 ರಿಂದ 13.8 ಕ್ಕೆ ಇಳಿದರೆ, ಸಂವಹನ ವಿಭಾಗದ ಪಾಲು ಶೇಕಡಾ 5.4 ರಷ್ಟು ಏರಿಕೆಯಾಗಿ 12.1 ಕ್ಕೆ ತಲುಪಿದೆ. ಇಂಧನ, ಯುಟಿಲಿಟಿಗಳು, ಸಂಪನ್ಮೂಲಗಳು, ಸೇವೆಗಳ ಪಾಲು ಶೇಕಡಾ 6.3 ರಿಂದ 13.3 ಕ್ಕೆ ಏರಿದೆ.