ಲಕ್ನೋ: ಗಾಯದ (Injured) ಸಮಸ್ಯೆಗೆ ತುತ್ತಾಗಿರುವ ಟೀಂ ಇಂಡಿಯಾ ಉಪನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಭಾನುವಾರ ಇಂಗ್ಲೆಂಡ್ (England) ವಿರುದ್ಧವೂ ಕಣಕ್ಕಿಳಿಯುವುದಿಲ್ಲ ಎಂದು ವರದಿಯಾಗಿದೆ
ಧರ್ಮಶಾಲಾದಲ್ಲಿ ನ್ಯೂಜಿಲೆಂಡ್ (New Zealand) ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದ ಪಂದ್ಯ ಲಕ್ನೋದಲ್ಲಿ ನಡೆಯಲಿರುವ ಪಂದ್ಯಕ್ಕೆ ಲಭ್ಯವಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಇನ್ನೂ ಗಾಯದಿಂದ ಹಾರ್ದಿಕ್ ಪಾಂಡ್ಯ ಚೇತರಿಸಿಕೊಂಡಿಲ್ಲ.
ಆರಂಭದಲ್ಲಿ ಪಾಂಡ್ಯ ಮೊಣಕಾಲಿಗೆ ಆದ ಗಾಯ ಸಣ್ಣ ಪ್ರಮಾಣದ್ದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಗಾಯ ಗಂಭೀರ ಸ್ವರೂಪದ್ದು ಎನ್ನುವುದು ಈಗ ದೃಢಪಟ್ಟಿದೆ.
ಒಂದು ವೇಳೆ ಪಾಂಡ್ಯ ಪಂದ್ಯವಾಡದೇ ಇದ್ದರೆ ವೇಗದ ಬೌಲರ್ ಮತ್ತು ಬ್ಯಾಟರ್ ಕೊರತೆಯಾಗಲಿದೆ. ಪಾಂಡ್ಯ ಆಲ್ರೌಂಡರ್ ಸ್ಥಾನವನ್ನು ತುಂಬಬಹುದಾದ ಆಟಗಾರರು ಸದ್ಯಕ್ಕೆ ಸಿಗದೇ ಇದ್ದರೂ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರಿಗೆ ಮತ್ತೊಮ್ಮೆ ಅವಕಾಶ ಸಿಗುವ ಸಾಧ್ಯತೆಯಿದೆ.