ವಿಧಾನ ಸಭೆ, ವಿಧಾನ ಪರಿಷತ್ ಮಾದರಿಯಲ್ಲಿ ಗದಗ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಗದಗ ಜನತಾ ಸದನ ಹೆಸರಿನ ಏರ್ಪಡಿಸಲಾಗಿತ್ತು. ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಪರಿಕಲ್ಪನೆಯ ಜನತಾ ಸದನಕ್ಕೆ ಮಾಜಿ ಸಚಿವ ಸಿಸಿ ಪಾಟೀಲ ಚಾಲನೆ ನೀಡಿದ್ರು. ಗದಗ ನಗರದ ಗಾಣಿಗ ಭವನದಲ್ಲಿ ಸಂಸತ್ ಹೋಲುವ ಆಸನ ವ್ಯವಸ್ಥೆ ಮಾಡಲಾಗಿದ್ದು,
ವಿರೋಧ ಪಕ್ಷದ ಸಾಲಿನಲ್ಲಿ ಮತ ಕ್ಷೇತ್ರದ ಹಿರಿಯರು, ಚಿಂತಕರನ್ನ ಕೂರಿಸಲಾಗಿತ್ತು.. ಆಡಳಿತ ಪಕ್ಷದ ಸಾಲಿನಲ್ಲಿ ಬಹುತೇಕ ಬಿಜೆಪಿ ಮುಖಂಡರು ಇದ್ದರು. ಸಭಾಧ್ಯಕ್ಷರಾಗಿ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ಕಾರ್ಯನಿರ್ವಹಿಸಿದ್ದು, ತಿಂಗಳ ನಾಲ್ಕನೆ ಶನಿವಾರ ಹಾಗೂ ಭಾನುವಾರ ಮತ ಕ್ಷೇತ್ರದ ವ್ಯಾಪ್ತಿಯ ಸಮಸ್ಯೆಗಳನ್ನ ಸದನದಲ್ಲಿ ಚರ್ಚಿಸಲು ಉದ್ದೇಶಿಸಲಾಗಿದೆ..