ಬೆಂಗಳೂರು:- ಪಕ್ಷಿಗಳ ಸಂತಾನೋತ್ಪತ್ತಿ ಹೆಚ್ಚಿಸುವ ದೃಷ್ಟಿಯಿಂದ ಕ್ರಮ ಕೈಗೊಂಡಿರುವ ತೋಟಗಾರಿಕಾ ಇಲಾಖೆ, ಲಾಲ್ ಬಾಗ್ನಲ್ಲಿ ‘ಇನ್ಸೆಕ್ಟ್ ಕೆಫೆ’ ಅಥವಾ ಕೀಟಗಳ ಕೆಫೆ ಮಾಡಿದೆ!
ಪಕ್ಷಿಗಳ ಸಂಖ್ಯೆ ಕಡಿಮೆಯಾಗುತ್ತಿರುವ ಕಾರಣ ಅವುಗಳ ಸಂತಾನೋತ್ಪತ್ತಿ ಹೆಚ್ಚಿಸುವ ಸಲುವಾಗಿ ಲಾಲ್ ಬಾಗ್ನಲ್ಲಿ ನೂತನ ಪ್ರಯತ್ನ ಮಾಡಲಾಗುತ್ತಿದೆ. ಪಕ್ಷಿಗಳ ಸಂತಾನೋತ್ಪತ್ತಿ ಹೆಚ್ಚಿಸಲು ‘ಇನ್ಸೆಕ್ಟ್ ಕೆಫೆ’ಯನ್ನು ಲಾಲ್ ಬಾಗ್ ಅಧಿಕಾರಿಗಳು ನಿರ್ಮಿಸಿದ್ದಾರೆ.
ಲಾಲ್ ಬಾಗ್ನಲ್ಲಿ ನಿರ್ಮಾಣವಾಗಿರುವ ಈ ‘ಇನ್ಸೆಕ್ಟ್ ಕೆಫೆ’ಯಲ್ಲಿ ವೈವಿಧ್ಯಮಯ ಬ್ಯಾಂಬುಸ್, ಮರದ ರೆಂಬೆ ಕೊಂಬೆಗಳನ್ನು ಹಾಕಲಾಗಿದೆ. ಜತೆಗೆ ಕ್ರಿಮಿ ಕೀಟಗಳು ಇರುವಂತೆಯೂ ನೋಡಿಕೊಳ್ಳಲಾಗಿದೆ. ಹೀಗಾಗಿ ಇಲ್ಲಿಗೆ ಕೀಟಗಳನ್ನು ತಿನ್ನಲೂ ಪಕ್ಷಿಗಳು ಬರುತ್ತವೆ. ಇದರಿಂದ ಈ ಮರದ ರೆಂಬೆಕೊಂಬೆಗಳಲ್ಲಿ ಮೊಟ್ಟೆಯನ್ನಿಟ್ಟು ಮರಿ ಮಾಡಲು ಅವುಗಳಿಗೆ ಅನುಕೂಲವಾಗಲಿದೆ. ಸದ್ಯ ಲಾಲ್ ಬಾಗ್ನ ಒಟ್ಟು 8 ಕಡೆ ಈ ಕೆಫೆಗಳನ್ನು ಮಾಡಿದ್ದು, ಪಕ್ಷಿ ಪ್ರಿಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಸದ್ಯ ಲಾಲ್ ಬಾಗ್ನಲ್ಲಿ ತ್ಯಾಜ್ಯಾವಾಗುವಂಥ ರೆಂಬೆಕೊಂಬೆಗಳನ್ನು ಒಂದೆಡೆ ಸೇರಿಸಿ ಪಕ್ಷಿಗಳಿಗೆ ಅನುಕೂಲವಾಗುವ ರೀತಿ ಕೀಟಗಳ ಕೆಫೆ ಮಾಡಲಾಗಿದೆ. ಒಂದೊಂದು ಕೆಫೆಗೆ ಒಟ್ಟು 40 ರಿಂದ 50 ಸಾವಿರ ರೂಪಾಯಿ ಖರ್ಚು ಮಾಡಲಾಗುತ್ತಿದೆ