ಬೆಂಗಳೂರು: ನಗರದಲ್ಲಿ ನೀರಿನ ಅಭಾವ ಮಿತಿಮೀರುತ್ತಿರುವ ಹಿನ್ನೆಲೆ ಜಲಮಂಡಳಿ ಮತ್ತಷ್ಟು ಟಫ್ ರೂಲ್ಸ್ ತರಲು ಮುಂದಾಗಿದೆ. ನೀರನ್ನ ಪೋಲು ಮಾಡೋದನ್ನ ತಡೆದು ಅವಶ್ಯವಿರೋರಿಗೆ ಪೂರೈಸಲು ಸಜ್ಜಾಗಿದೆ. ಈ ಬಗ್ಗೆ ಒಂದು ರಿಪೋರ್ಟ್ ಇಲ್ಲಿದೆ ನೋಡಿ. ನೀರಿನ ಅಭಾವ ತಡೆಯಲು ಜಲಮಂಡಳಿ ಹರಸಾಹಸ ಮಾಡ್ತಿದೆ. ನೀರಿನ ಪೋಲು, ದುಂದುವೆಚ್ಚ, ತಡೆಯಲು ಪ್ಲಾನ್ ರೂಪಿಸುತ್ತಲೇ ಇದೆ. ಇದಕ್ಕಾಗಿ ಬೆಂಗಳೂರಿನಲ್ಲಿ ನಲ್ಲಿಗಳಿಗೆ ಏರಿಯೇಟರ್ ಅಳವಡಿಕೆ ಕಡ್ಡಾಯ ಮಾಡಲಾಗಿದೆ. ಏರಿಯೇಟರ್ ಅಳವಡಿಕೆಗೆ ಜಲ ಮಂಡಳಿ ಮಾರ್ಚ್ ೩೧ರ ಗಡವನ್ನ ಸಹ ನೀಡಿದೆ.
ಇದರಿಂದ ನೀರು ಪೋಲಾಗುವುದು ತಡೆಯಬಹುದು ಅನ್ನೋದು ಜಲಮಂಡಲೀ ಪ್ಲಾನ್. ಇನ್ನು ಹೋಟೆಲ್,ರೆಸ್ಟೋರೆಂಟ್ ಮಾಲೀಕರ ಜೊತೆಗೂ ಇಂದು ಜಲಮಂಡಳಿ ಅಧ್ಯಕ್ಷರು ಸಭೆ ನಡೆಸಿ ಸೂಚನೆ ಜೊತೆಗೆ ಎಚ್ಚರಿಕೆ ಸಹ ನೀಡಿದ್ದಾರೆ. ಹೋಟೆಲ್ ಗಳಿಗೆ ನೀರಿನ ಬಳಕೆ ಬಗ್ಗೆ ಮಾರ್ಗಸೂಚಿ ಹೊರಡಿಸಲಾಗುತ್ತೆ. ಮಾರ್ಗಸೂಚಿಯಂತೆ ಹೋಟೆಲ್ ಗಳು ನೀರಿನ ಬಳಕೆ ಮಾಡಬೇಕು. ನೀರಿನ ಬಳಕೆಯನ್ನ ಆದಷ್ಟು ಮಾಡಬೇಕು..೩೧ ರೊಳಗೆ ನೀರಿನ ಬಳಕೆ ಕಡಿಮೆ ಮಾಡಲು ಡೆಡ್ ಲೈನ್ ನೀಡಲಾಗಿದೆ. ಹೋಟೆಲ್ ಮಾಲೀಕರು ಸಿಬ್ಬಂದಿಗಳಿಗೆ ಬಳಕೆ ಬಗ್ಗೆ ಅರಿವು ಮೂಡಿಸಿ ನೀರನ್ನ ಅವಶ್ಯಕತೆಯಷ್ಟೇ ಬಳಕೆ ಮಾಡಿ ಎಂದು ಸೂಚನೆ ನೀಡಲಾಗಿದೆ.
ಇನ್ನು ಜಲಮಂಡಳಿ ಈಗಾಗಲೇ ಸೂಚನೆ ನೀಡಿರುವಂತೆ ರೈನ್ ಡ್ಯಾನ್ಸ್, ಪೂಲ್ ಡ್ಯಾನ್ಸ್ ನಂತರ ವಾಣಿಜ್ಯ ಉದ್ದೇಶದ ಹೋಳಿ ಆಚರಣೆಗೆ ಕಾವೇರಿ ನೀರು ಹಾಗೂ ಕೊಳವೆ ಬಾವಿಗಳ ನೀರು ಬಳಸುವುದನ್ನ ನಿಷೇಧಿಸಲಾಗಿದೆ. ಈ ಬಗ್ಗೆ ತಮ್ಮ ಹೋಟೆಲ್ ರೆಸ್ಟೋರೆಂಟ್ ಅಸೋಸಿಯೇಷನ್ ತಮ್ಮ ಸದಸ್ಯರುಗಳ ಗಮನಕ್ಕೆ ತಂದು ಅನಗತ್ಯ ದುರ್ಬಳಕೆ ಅಗದಂತೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಸದ್ಯ ನದಿಪಾತ್ರದಲ್ಲಿ ಇರುವ ನೀರು ಈ ಇಡೀ ಬೇಸಿಗೆಗೆ ಸಾಕಾಗುವುದು ಅನುಮಾನ.
ಬೇಸಿಗೆ ಆರಂಭದಲ್ಲಿಯೇ ನೀರಿಗೆ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿದೆ.ಆದ್ದರಿಂದ ಇರುವ ನೀರನ್ನು ಸುಸೂತ್ರವಾಗಿ, ಸಮರ್ಪಕವಾಗಿ ಬಳಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಇದಕ್ಕಾಗಿ ಜಲಮಂಡಳಿ ಹಲವು ಕಠಿಣ ಕ್ರಮಕ್ಕೆ ಮುಂದಾಗಿದೆ. ಇದನ್ನ ಯಾವ ರೀತಿ ಕಾರ್ಯರೂಪಕ್ಕೆ ತರುತ್ತೆ ಜೊತೆಗೆ ಜನರಿಗೆ ಸಮಸ್ಯೆಯಿಲ್ಲದೇ ನೀರು ಪೂರೈಕೆ ಮಾಡುತ್ತೆ ಎಂದು ಕಾದುನೋಡಬೇಕು.