ಕಾನ್ಪುರ: ಈಗಿನ ಕಾಲದಲ್ಲಿ ಹುಡುಗಿ ಅಥವಾ ಹುಡುಗ ತನ್ನ ಪ್ರೀತಿ ಉಳಿಸಿಕೊಂಡು ಮದುವೆಯಾಗುವುದು ಹರಸಾಹಸವೇ ಸರಿ. ಕಾರಣ ಪ್ರೀತಿ ಯಾವಾಗ ಕೊನೆಯಾಗುತ್ತೆ, ಮತ್ತೊಂದು ಪ್ರೀತಿ ಯಾವಾಗು ಶುರುವಾಗುತ್ತೆ ಅನ್ನೋದು ಊಹಿಸಲು ಅಸಾಧ್ಯ. ಹೀಗಾದರೆ ಇದರಲ್ಲಿ ಅಚ್ಚರಿ ಇಲ್ಲ ಬಿಡಿ. ಆದರೆ ಇಲ್ಲೊಬ್ಬನಿಗೆ ಶಾಕ್ ಮೇಲ ಶಾಕ್ ಎದುರಾಗಿದೆ. 20ಹರೆಯದ ಯುವತಿಯನ್ನು ಗಾಢವಾಗಿ ಪ್ರೀತಿಸುತ್ತಿದ್ದ. ಆಕೆ ಕೂಡ ಈತನ ಮನಗೆ ಬರುತ್ತಿದ್ದಳು. ರಾತ್ರಿ ಫೋನ್, ಬೈಕಲ್ಲಿ ಒಂದು ರೌಂಡ್ ಸುತ್ತಾಟ ಎಲ್ಲವೂ ಇತ್ತು. ಹೀಗೆ ಒಂದು ರಾತ್ರಿ ಫೋನ್ ಸವಿಮಾತನಾಡಿ ಮಲಗಿದ್ದಾನೆ. ಬೆಳಗ್ಗೆ ಎದ್ದಾಗ ಆಘಾತ. ಕಾರಣ ತಾನು ಪ್ರೀತಿಸಿದ ಹುಡುಗಿ, ತನ್ನ ಅಪ್ಪನ ಜೊತೆ ಓಡಿ ಹೋಗಿದ ಘಟನೆ ಕಾನ್ಪುರದಲ್ಲಿ ನಡೆದಿದೆ.
ಕಾನ್ಪುರದ ನಿವಾಸಿ 20 ವರ್ಷದ ಅಮಿತ್ ಯುವತಿಯನ್ನು ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದ. ಕಮಲೇಶ್ ತನ್ನ ಪ್ರೀತಿಯನ್ನು ಮನೆಯವರಿಗೂ ಹೇಳಿದ್ದ. ಹುಡುಗನ ವಯಸ್ಸು ಚಿಕ್ಕದು ಇನ್ನೊಂದು ವರ್ಷ ಹೋದರೆ ಮದುವೆ ಎಂಬ ಮಾತು ಮನೆಯವರಿಂದಲೇ ಬಂದಿತ್ತು. ಹೀಗಾಗಿ ಮನೆಯಿಂದ ಗ್ರೀನ್ ಸಿಗ್ನಲ್ ಸಿಕ್ಕ ಮೇಲೆ ಇನ್ನೇನು ಬೇಕು ಹೇಳಿ. ಇವರಿಬ್ಬರ ಸುತ್ತಾಟ, ಹಾರಾಟ ಜೋರಾಗಿತ್ತು. ಇತ್ತ ಯುವತಿ ಕೂಡ ಪದೇ ಪದೇ ಅಮಿತ್ ಮನೆಗೆ ಬರುತ್ತಿದ್ದಳು. ಇವರ ಪ್ರೀತಿ ಯಾವುದೇ ಆತಂಕವಿಲ್ಲದೆ ಮುಂದುವರಿದಿತ್ತು.
ಪ್ರತಿ ದಿನ ಫೋನ್, ಭೇಟಿ ಇವೆಲ್ಲವೂ ಸಾಮಾನ್ಯವಾಗಿತ್ತು. ಹೀಗೆ 2022ರ ಮಾರ್ಚ್ ತಿಂಗಳಲ್ಲಿ ರಾತ್ರಿ ಫೋನ್ ಮೂಲಕ ಮಾತನಾಡಿ ಅಮಿತ್ ಮಲಗಿದ್ದಾನೆ. ಬೆಳಗ್ಗೆ ಎದ್ದಾಗ ಶಾಕಿಂಗ್ ನ್ಯೂಸ್. ತಾನು ಪ್ರೀತಿಸಿದ ಯುವತಿ ತನ್ನ ಅಪ್ಪ ಕಮಲೇಶ್ ಜೊತೆ ಓಡಿ ಹೋಗಿದ್ದಾಳೆ. ಅಪ್ಪನ ಫೋನ್ ಹಾಗೂ ಯುವತಿ ಫೋನ್ ಸ್ವಿಚ್ ಆಫ್. ಯುವತಿ ಕುಟುಂಬಸ್ಥರು ಹಾಗೂ ಅಮಿತ್ ಕುಟುಂಬಸ್ಥರು ದೂರು ದಾಖಲಿಸಿದ್ದರು.
ಕಳೆದೊಂದು ವರ್ಷದಿಂದ ಹುಡುಕಾಟ ನಡೆಸಿದ ಪೊಲೀಸರು ಇದೀಗ ಕಮಲೇಶ್ ಹಾಗೂ ಯುವತಿಯನ್ನು ಪತ್ತೆ ಹಚ್ಚಿದ್ದಾರೆ. ದೆಹಲಿಯಲ್ಲಿ ಇವರಿಬ್ಬರು ಜೊತೆಯಾಗಿ ವಾಸವಿರುದನ್ನು ಪತ್ತೆ ಹಚ್ಚಿದ ಪೊಲೀಸರ ಕಮಲೇಶನ್ನ್ನು ವಶಕ್ಕೆ ಪಡೆದಿದ್ದಾರೆ. ಯುವತಿಯ ವೈದ್ಯಕೀಯ ಪರೀಕ್ಷೆಗೆ ಸೂಚಿಸಲಾಗಿದೆ. ಯವತಿ ಕುಟುಂಬಸ್ಥರು, ಕಿಡ್ನಾಪ್ ಕೇಸ್ ದಾಖಲಿಸಿದ್ದರು. ಹೀಗಾಗಿ ಕಮಲೇಶ್ ಇದೀಗ ಪೊಲೀಸ್ ಕಸ್ಟಡಿ ಗತಿಯಾಗಿದೆ.
ಪ್ರಕಣದ ತನಿಖೆ ನಡೆಸಿದ ಪೊಲೀಸರೇ ಒಂದು ಕ್ಷಣ ದಂಗಾಗಿದ್ದಾರೆ. ಮಗನ ಹುಡುಗಿಯನ್ನು ತಂದೆ ಪ್ರೀತಿಸಿ ಮದುವೆಯಾದ ಈ ಘಟನೆ ಯಾವ ಸಿನಿಮಾಗೂ ಕಡಿಮೆ ಇಲ್ಲ. ಅಮಿತ್ ಪ್ರೀತಿಸಿದ ಯುವತಿ ಮನೆಗೆ ಬರುತ್ತಿದ್ದಳು. ಈ ವೇಳೆ ಅಮಿತ್ ತಂದೆ ಕಮಲೇಶ್ ಸಹಜವಾಗಿ ಮಾತನಾಡಿದ್ದಾರೆ. ಇವರ ಮಾತು ಪ್ರೀತಿಗೆ ತಿರುಗಿದೆ. ಇತ್ತ ಬಾಯ್ಫ್ರೆಂಡ್ ಅಮಿತ್ ಜೊತೆಗೆ ನಾಮಕವಾಸ್ತೆಗೆ ಮಾತನಾಡುತ್ತಿದ್ದಳು. ನಿಜವಾದ ಪ್ರೀತಿ ಅಮಿತ್ ತಂದೆ ಜೊತೆ ಶುರುವಾಗಿದೆ. ಹೀಗೆ ಪ್ರೀತಿಸಿದ ಕಮಲೇಶ್ ಹಾಗೂ ಯುವತಿ ರಾತ್ರೋರಾತ್ರೋ ದೆಹಲಿಗೆ ಓಡಿ ಹೋಗಿ ಜೊತೆಯಾಗಿ ನಲೆಸಿದ್ದಾರೆ. ಇವರಿಬ್ಬರು ಮದುವೆಯಾಗಿದೆಯಾ? ಅನ್ನೋ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.