ಮೊಳಕಾಲ್ಮೂರು, ಸೆ.23 ವಿವಿಧ ಕಡೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ, ಇಬ್ಬರು ಅಂತಾರಾಜ್ಯ ಸಹೋದರ ಕಳ್ಳರನ್ನು ಬಂಧಿಸಿ ಜೈಲಿಗಟ್ಟುವಲ್ಲಿ ಮೊಳಕಾಲ್ಮೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಆಂಧ್ರಪ್ರದೇಶದ ಉರುವಕೊಂಡ ಗ್ರಾಮದ ವಿ.ಮಹೇಶ(33) ಪ್ರಭಾಕರ(23) ಬಂಧಿತ ಆರೋಪಿಗಳುಇತ್ತೀಚೆಗೆ, ಪಟ್ಟಣದ ಕೋನಸಾಗರ ರಸ್ತೆಯ ಖಾಲಿ ನಿವೇಶನದಲ್ಲಿ ನಿಲ್ಲಿಸಿದ್ದ ಟಿಪ್ಪರ್ ನ್ನು ಕಳ್ಳರು ಕಳುವು ಮಾಡಿದ್ದರು.
ನಂತರ,ಮೊಳಕಾಲ್ಮೂರು ಪೊಲೀಸರು ದೂರು ದಾಖಲಿಸಿಕೊಂಡು,ಕಳ್ಳರನ್ನು ಸೆರೆ ಹಿಡಿಯಲು ಬಲೆ ಬೀಸಿದ್ದರು. ಸುಮಾರು 12 ಲಕ್ಷ ಮೌಲ್ಯದ ಟಿಪ್ಪರ್ ಲಾರಿ ಹಾಗೂ 1,80,000 ಮೌಲ್ಯದ ಬುಲೆಟ್ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಇಬ್ಬರು ಸಹೋದರರು ಆಂಧ್ರ ಪ್ರದೇಶ,ಬಳ್ಳಾರಿ, ವಿಜಯನಗರ, ಕೊಪ್ಪಳ, ದಾವಣಗೆರೆ ಜಿಲ್ಲೆಗಳಲ್ಲಿ ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.
ಈಗಾಗಲೇ,ಇಬ್ಬರೂ ಕಳ್ಳರು ಸೆರೆವಾಸ ಅನುಭವಿಸಿ ಇತ್ತೀಚೆಗೆ ಜೈಲಿಂದ ಬಿಡುಗಡೆಯಾಗಿದ್ದು, ಬಿಡುಗಡೆಯ ನಂತರವೂ, ತನ್ನ ಚಾಳಿಯನ್ನು ಮುಂದುವರಿಸಿ ಕಳ್ಳತನ ಎಸಗಿದ್ದಾರೆ. ಚಿತ್ರದುರ್ಗ ಜಿಲ್ಲಾ ರಕ್ಷಣಾಧಿಕಾರಿ ರಂಜಿತ್ ಕುಮಾರ್ ಬಂಡಾರು , ಎಎಸ್ಪಿ ಕುಮಾರಸ್ವಾಮಿ ಹಾಗೂ ಡಿವೈಎಸ್ ಪಿ ರಾಜಣ್ಣ ಮಾರ್ಗದರ್ಶನದಲ್ಲಿ, ಸಿಪಿಐ ವಸಂತ ಸರೋದೆ ಇವರ ನೇತೃತ್ವದಲ್ಲಿ, ಪಿಎಸ್ಐ ಪಾಂಡುರಂಗಪ್ಪ, ಹಾಗೂ ಅಪರಾಧ ವಿಭಾಗದ ಪಿಎಸ್ಐ ಈರೇಶ್ ಅವರು, ರಮೇಶ್, ಸುಧೀರ್, ಮಂಜುನಾಥ, ಪ್ರಭುದೇವ, ರಾಘವೇಂದ್ರ,ವೀರಣ್ಣ ಹರೀಶ,ಖಾದರ್ ಭಾಷಾ, ಮಂಜುನಾಥ ಮಾರಣ್ಣ,
ಮಹಾಂತೇಶ್ ,ಮಾರಣ್ಣ, ನಂದಪ್ಪ ಪೂಜಾರಿ,ಶಶಿಧರ, ಪೊಲೀಸ್ ಸಿಬ್ಬಂದಿ ತಂಡ ರಚಿಸಿ ತಂಡ ರಚಿಸಿಕೊಂಡು ಕಾರ್ಯಾಚರಣೆ ನಡೆಸಿ, ಆಂಧ್ರಪ್ರದೇಶದ ಉರುವಕೊಂಡದಲ್ಲಿ ಇಬ್ಬರು ಸಹೋದರ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಬ್ಬರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾದ ಮೊಳಕಾಲ್ಮೂರು ಪೊಲೀಸರನ್ನು ಚಿತ್ರದುರ್ಗ ಜಿಲ್ಲಾ ರಕ್ಷಣಾಧಿಕಾರಿ ರಂಜಿತ್ ಕುಮಾರ್ ಬಂಡಾರು ರವರು ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾದ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ,ಬಹುಮಾನ ಘೋಷಿಸಿದ್ದಾರೆ.