ಹುಬ್ಬಳ್ಳಿ : ವಿಶ್ವ ಯೋಗ ದಿನಾಚರಣೆ ಒಂದೇ ದಿನಕ್ಕೆ ಸೀಮೀತ ಬೇಡ ಇದು ನಿರಂತರವಾಗಿ ನಡೆಯಬೇಕು. ಯೋಗ ದೇಶ ಬಲಿಷ್ಠವಾಗಲು ದೇಹ ಬಲಿಷ್ಠವಾಗಬೇಕೆಂಬ ನಿಟ್ಟಿನಲ್ಲಿ ಜಾಗತಿಕವಾಗಿ ಪ್ರಧಾನಿ ನರೇಂದ್ರ ಮೋದಿ ಪರಿಚಯಿಸಿದ ಯೋಗವನ್ನು ಇಡೀ ಜಗತ್ತು ಅಪ್ಪಿಕೊಂಡಿದೆ ಎಂದು ಕ್ಷಮತಾ ಸಂಸ್ಥೆಯ ಸಂಚಾಲಕ ಗೋವಿಂದ ಜೋಶಿ ಹೇಳಿದರು.
ಇಲ್ಲಿನ ದೇಶಪಾಂಡೆ ನಗರ ಜಿಮ್ನಾ ಮೈದಾನದಲ್ಲಿ ಕ್ಷಮತಾ ಸಂಸ್ಥೆ, ಜಿಮ್ಾನಾ ಅಸೋಶಿಯೇಶನ್ ಹಾಗೂ ಧಮ್ಮೋಸ್ಮಿ ಯೋಗ ಕೇಂದ್ರದ ಸಹಯೋಗದಲ್ಲಿಂದು ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
197 ರಾಷ್ಟ್ರಗಳು ಯೋಗದತ್ತ ತಿರುಗಿವೆ. ಈ ಹಿಂದೆ ಹಿಂದು ಜೀವನ ಪದ್ಧತಿ ಮತ್ತು ವಿಧಾನಗಳ ಬಗ್ಗೆ ಮೂಗು ಮುರಿಯುತ್ತ ಪಾಶ್ಚಾತ್ಯ ಅನುಕರಣೆಗೆ ವಾಲಿದ್ದ ನಮಗೆ, ಪ್ರಧಾನಿ ಮೋದಿ ಅವರು ಜಗತ್ತಿಗೆ ಯೋಗ ಪರಿಚಿಯಿಸಿದ ನಂತರದಲ್ಲಿ ಹೆಚ್ಚು ಅಭಿಮಾನ ಮೂಡುವಂತಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಯೋಗ ಶಿಕ್ಷಕರನ್ನು ಸನ್ಮಾನಿಸಲಾಯಿತು. ಧನ್ಯೂಸ್ಮಿ ಯೋಗ ಕೇಂದ್ರದ ಯೋಗಗುರು ವಿನಾಯಕ ತಲಗೇರಿ ಹಾಗೂ ಪಾಲಿಕೆ ಸದಸ್ಯೆ ಮೀನಾಕ್ಷಿ ವಂಟಮೂರಿ ಮುಂತಾದವರು ಭಾಗವಹಿಸಿದ್ದರು.
ವಿಶ್ವ ಹಿಂದು ಪರಿಷತ್ತಿನ ಪ್ರದೀಪ ಶೆಟ್ಟಿ ಪ್ರಾರ್ಥಿಸಿದರು. ಸರ್ವಮಂಗಳಾ ಆಚಾರ್ಯ ನಿರೂಪಿಸಿ, ವಂದಿಸಿದರು.