ನಾಳೆ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯುವ ಪಂದ್ಯ
ಆರ್ಸಿಬಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಹೈದರಾಬಾದ್ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೆಣಸಾಡಲಿದೆ.
ಇದೇ ಸೀಸನ್ ನಲ್ಲಿ ಕಳೆದ ಬೆಂಗಳೂರು ಪಂದ್ಯದಲ್ಲಿ ಸನ್ರೈಸರ್ಸ್ ದಾಖಲೆಯ ಒಟ್ಟು 287 ರನ್ಗಳನ್ನು ಬಾರಿಸಿತ್ತು. ಇದು ಐಪಿಎಲ್ ಇತಿಹಾಸದಲ್ಲಿಯೇ ಅತಿ ದೊಡ್ಡ ಮೊತ್ತವಾಗಿದೆ. ಹೀಗಾಗಿ ನಾಳಿನ ಪಂದ್ಯದಲ್ಲಿ ಆರ್ಸಿಬಿ ತಂಡ ಈ ಸೇಡಿಗೆ ಪ್ರತ್ಯುತ್ತರ ನೀಡುತ್ತದೆಯೇ ಎಂದು ಕಾದುನೋಡಬೇಕಿದೆ.
ಆದರೆ ಈ ಪಂದ್ಯವು ಹೈದರಾಬಾದ್ ತವರು ಮೈದಾನವಾದ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುವುದರಿಂದ ತವರು ಮೈದಾನದ ಲಾಭವನ್ನು ಪಡೆಯುವ ನಿರೀಕ್ಷೆಯಲ್ಲಿದೆ. ಆದರೆ ಪಿಚ್ ಬ್ಯಾಟಿಂಗ್ ಸ್ನೇಹಿ ಆಗಿರುವುದರಿಂದ ಆರ್ಸಿಬಿ ಬ್ಯಾಟಿಂಗ್ ಲೈನ್ ಅಪ್ ಸಹ ಉತ್ತಮವಾಗಿದ್ದು, ಬಿಗ್ ಸ್ಕೋರ್ ಮ್ಯಾಚ್ ಖಂಡಿತ ಎನ್ನಲಾಗುತ್ತಿದೆ
ಪಿಚ್ ಬ್ಯಾಟಿಂಗ್ಗೆ ಉತ್ತಮವಾಗಿರುವ ಸಾಧ್ಯತೆಯಿದೆ ಮತ್ತು ಋತುವಿನ ಒಂದು ಪಂದ್ಯದಲ್ಲಿ ಈ ಮೈದಾನದಲ್ಲಿ 500ಕ್ಕೂ ಹೆಚ್ಚು ರನ್ ಹರಿದುಬಂದಿತ್ತು. ಬೌನ್ಸ್ ಪಂದ್ಯದುದ್ದಕ್ಕೂ ಹೆಚ್ಚು ಸಹಾಯವಾಗಲಿದ್ದು, ಸ್ಪಿನ್ನರ್ಗಳಿಗೆ ಸ್ವಲ್ಪ ತಿರುವು ಇರಬಹುದು. ಆದರೆ ಒಟ್ಟಾರೆಯಾಗಿ, ನಾವು ಮತ್ತೊಂದು ಹೆಚ್ಚಿನ ಸ್ಕೋರಿಂಗ್ ಪಂದ್ಯವನ್ನು ನಿರೀಕ್ಷಿಸಬಹುದು.
ಹೈದರಾಬಾದ್ ಇದುವರೆಗೆ ಆಡಿರುವ ಏಳು ಪಂದ್ಯಗಳಲ್ಲಿ ಐದರಲ್ಲಿ ಗೆದ್ದು ಅದ್ಭುತ ಫಾರ್ಮ್ನಲ್ಲಿದೆ. ಆಡಿದ ಎಂಟು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನು ಗೆದ್ದಿರುವ ಆರ್ಸಿಬಿಗೆ ಈ ಪಂದ್ಯದ ಅತ್ಯಂತ ಮಹತ್ವದ್ದಾಗಿದೆ. ಅಲ್ಲದೇ ಈಗಾಗಲೇ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿರುವ ಆರ್ಸಿಬಿ ಪ್ಲೇಆಫ್ ಆಸೆ ಜೀವಂತವಾಗಿರಲು ಈ ಪಂದ್ಯ ಗೆಲ್ಲಲೇಬೇಕಿದೆ.
ಬೆಂಗಳೂರು ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದು, ಟೂರ್ನಿಯ ಪ್ಲೇ ಆಫ್ ರೇಸ್ ನಿಂದ ಹೊರಗುಳಿಯುವ ಅಪಾಯದಲ್ಲಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಜಸ್ಟ್ 1 ರನ್ನಿಂದ ಸೋತಿರುವ ಆರ್ಸಿಬಿಗೆ ಮುಂದಿನ ಪ್ರಯಾಣ ಕಷ್ಟವಾಗಲಿದೆ. ಹೀಗಾಗಿ ಆರ್ಸಿಬಿ ತಂಡವು ಪ್ಲೇಆಫ್ ಪ್ರವೇಶಿಸಬೇಕು ಎಂದರೆ ಅಲ್ಲೊಂದು ಪವಾಡವೇ ನಡೆಯಬೇಕು. ಏಕೆಂದರೆ ತನ್ನ ಮುಂದಿನ 6 ಪಂದ್ಯಗಳನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗೆಲ್ಲಬೇಕಿದೆ