2024 ರಲ್ಲಿ ಆರ್ಸಿಬಿ ಹೊಸ ವಿನ್ಯಾಸದ ಲೋಗೋದೊಂದಿಗೆ ಕಣಕ್ಕಿಳಿಯಲಿದ್ದು, ಇದಕ್ಕೂ ಮುನ್ನ ಆರ್ಸಿಬಿ ಐಪಿಎಲ್ನಲ್ಲಿ 4 ಬಾರಿ ಲೋಗೋವನ್ನು ಬದಲಿಸಿಕೊಂಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಮುಂಬರುವ ಐಪಿಎಲ್ಗಾಗಿ ತನ್ನ ಲೋಗೋ ವಿನ್ಯಾಸವನ್ನು ಬದಲಿಸಿದೆ. ಈ ಬದಲಾವಣೆಯೊಂದಿಗೆ ರಾಯಲ್ ಚಾಲೆಂಜರ್ಸ್ ಬ್ಯಾಂಗಲೋರ್ ಹೆಸರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಬದಲಿಸಿಕೊಂಡಿದೆ.
ವಿಶೇಷ ಎಂದರೆ ಆರ್ಸಿಬಿ ಫ್ರಾಂಚೈಸಿಯು ತನ್ನ ಲೋಗೋವನ್ನು ಬದಲಿಸುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ನಾಲ್ಕು ಬಾರಿ ಹೊಸ ಲೋಗೋದೊಂದಿಗೆ ಕಣಕ್ಕಿಳಿದಿದೆ. ಇದೀಗ ಐದನೇ ಬಾರಿಗೆ ಲೋಗೋ ಬದಲಿಸಿ ಕಣಕ್ಕಿಳಿಯಲು ಸಜ್ಜಾಗಿ ನಿಂತಿದೆ.