ಇರಾನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದ ಅಮೀರ್ ಹೊಸೇನ್ ಘಜೀಜಾದೇ ಹಾಶಿಮಿ ಅವರು ಕಣದಿಂದ ಹಿಂದೆ ಸರಿದಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ.
53 ವರ್ಷದ ಅಮೀರ್ ಹೊಸೇನ್ ಘಜೀಜಾದೇ ಹಾಶಿಮಿ ಅವರು ಇಬ್ರಾಹಿಂ ರೈಸಿ ಅವರ ಆಡಳಿತದಲ್ಲಿ ಉಪಾಧ್ಯಕ್ಷರುಗಳಲ್ಲಿ ಒಬ್ಬರಾಗಿದ್ದರು. 2021ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅವರು ಸುಮಾರು 10 ಲಕ್ಷ ಮತಗಳೊಂದಿಗೆ ಕೊನೆಯ ಸ್ಥಾನ ಗಳಿಸಿದ್ದರು.
ಇರಾನ್ ಅಧ್ಯಕ್ಷರ ಚುನಾವಣೆಯಲ್ಲಿ ಇದುವರೆಗೂ ಆರು ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದರು. ಇದೀಗ ಹಾಶಿಮಿ ಅವರು ಹಿಂದೆ ಸರಿದಿರುವುದರಿಂದ ಕಣದಲ್ಲಿ ಐವರು ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ. ಇರಾನ್ ಅಧ್ಯಕ್ಷರಾಗಿದ್ದ ಇಬ್ರಾಹಿಂ ರೈಸಿ ಅವರು ಮೇ ತಿಂಗಳಲ್ಲಿ ನಡೆದಿದ್ದ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದರು.