ತೆಹ್ರಾನ್: ಕಡ್ಡಾಯ ವಸ್ತ್ರ ಸಂಹಿತೆ ಅನ್ನು ಧಿಕ್ಕರಿಸುವ ಮಹಿಳೆಯರ ಸಂಖ್ಯೆಯನ್ನು ನಿಯಂತ್ರಿಸುವ ಮತ್ತಷ್ಟು ಪ್ರಯತ್ನ ಮಾಡಿರುವ ಇರಾನ್ ಅಧಿಕಾರಿಗಳು, ವಸ್ತ್ರ ಸಂಹಿತೆ ಪಾಲಿಸದ ಮಹಿಳೆಯರನ್ನು ಗುರುತಿಸಲು ಮತ್ತು ದಂಡ ವಿಧಿಸಲು ಸಾರ್ವಜನಿಕ ಸ್ಥಳ ಮತ್ತು ರಸ್ತೆಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸುತ್ತಿದ್ದಾರೆ ಎಂದು ಇರಾನ್ ಪೊಲೀಸರು ತಿಳಿಸಿದ್ದಾರೆ.
ವಸ್ತ್ರ ಸಂಹಿತೆಯನ್ನು ಪಾಲಿಸದ ಮಹಿಳೆಯರಿಗೆ ಅವುಗಳ ‘ಪರಿಣಾಮಗಳ ಬಗ್ಗೆ ಎಚ್ಚರಿಕೆಯ ಸಂದೇಶವನ್ನು’ ಕಳುಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ‘ತಮ್ಮ ಸಂಸ್ಥೆಯಲ್ಲಿ ಸಾಮಾಜಿಕ ನಿಯಮಗಳ ಅನುಸರಣೆಯನ್ನು ಗಂಭೀರವಾಗಿ ಮೇಲ್ವಿಚಾರಣೆ ಮಾಡುವಂತೆ’ ಸಂಸ್ಥೆಗಳ ಮುಖ್ಯಸ್ಥರಿಗೆ ಪೊಲೀಸರು ಸೂಚಿಸಿದ್ದಾರೆ.
ಕಳೆದ ಸೆಪ್ಟೆಂಬರ್ನಲ್ಲಿ ಹಿಜಾಬ್ ನಿಯಮವನ್ನು ಉಲ್ಲಂಘಿಸಿದ ಆರೋಪದ ಮೇಲೆ 22 ವರ್ಷದ ಕುರ್ದಿಶ್ ಮಹಿಳೆ ಮಹ್ಸಾ ಅಮಿನಿಯನ್ನು ಬಂಧಿಸಲಾಗಿತ್ತು. ಪೊಲೀಸರ ವಶದಲ್ಲಿದ್ದಾಗಲೇ ಅವರು ಮೃತಪಟ್ಟಿದ್ದರು. ಇದಾದ ಬಳಿಕೆ ಹಿಜಬ್ ವಿರುದ್ಧ ಇರಾನ್ ಮಹಿಳೆಯರ ಆಕ್ರೋಶ ಭುಗಿಲೆದ್ದಿದೆ. ಆ ಬಳಿಕ ಇರಾನ್ ನಲ್ಲಿ ಸಾಕಷ್ಟು ಮಹಿಳೆಯರು ಹಿಜಾಬ್ ಅನ್ನು ವಿರೋಧಿಸುತ್ತಿದ್ದು ಅವುಗಳನ್ನು ಧರಿಸದಿರಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳ ಮತ್ತು ರಸ್ತೆಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ.