ಲೆಬನಾನ್ನಲ್ಲಿ ಇಸ್ರೇಲ್ ನಡೆಸಿದ ವಾಯು ದಾಳಿಯಲ್ಲಿ ಹೆಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಜೊತೆಗೆ ಇರಾನ್ನ ಡೆಪ್ಯೂಟಿ ಕಮಾಂಡರ್ ಕೂಡ ಹತ್ಯೆ ಗೀಡಾಗಿದ್ದಾರೆ. ಬೈರುತ್ನಲ್ಲಿ ಇಸ್ರೇಲ್ ದಾಳಿಯಲ್ಲಿ ಇರಾನ್ನ ರೆವಲ್ಯೂಷನರಿ ಗಾರ್ಡ್ಸ್ನ ಡೆಪ್ಯೂಟಿ ಕಮಾಂಡರ್ ಅಬ್ಬಾಸ್ ನಿಲ್ಫೊರೊಶನ್ ಕೂಡ ಸಾವನ್ನಪ್ಪಿದ್ದಾರೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ಅಬ್ಬಾಸ್ ನಿಲ್ಫೊರೊಶನ್ ಬ್ರಿಗೇಡಿಯರ್ ಜನರಲ್ ಆಗಿದ್ದರೂ ಲೆಬನಾನ್ನಲ್ಲಿ ಕುಡ್ಸ್ ಫೋರ್ಸ್ನ ಕಮಾಂಡರ್ ಆಗಿದ್ದರು. ನಿಲ್ಫೊರೊಶನ್ ಅವರು IRGC ಯ ಕಾರ್ಯಾಚರಣೆಗಳ ಕಮಾಂಡ್ ಅನ್ನು ನೋಡಿಕೊಳ್ಳುತ್ತಿದ್ದರು. ಇದು ವಿವಿಧ ಮಿಲಿಟರಿ ಮತ್ತು ಭದ್ರತಾ ಕಾರ್ಯಾಚರಣೆಗಳಲ್ಲಿ ನೇರವಾಗಿ ತೊಡಗಿಸಿಕೊಂಡಿದೆ. ಇದು ವಿಶೇಷವಾಗಿ ಸಿರಿಯಾದಲ್ಲಿ ಮಿಲಿಟರಿ ಚಟುವಟಿಕೆಯನ್ನು ನಡೆಸಿತ್ತು. ಇಸ್ರೇಲಿ ವೈಮಾನಿಕ ದಾಳಿ ನಡೆದಾಗ ಅವರು ಶುಕ್ರವಾರ ನಸ್ರಲ್ಲಾ ಅವರೊಂದಿಗೆ ಬೈರುತ್ನಲ್ಲಿದ್ದರು. ನಸ್ರಲ್ಲಾ ಜೊತೆ ಅಬ್ಬಾಸ್ ಕೂಡ ಹತ್ಯೆಗೀಡಾಗಿದ್ದಾರೆ.
ಲೆಬನಾನ್ನಲ್ಲಿ ಇಸ್ರೇಲ್ ಸೇನೆಯ ದಾಳಿಗೆ ಇರಾನ್ ಪ್ರತಿಕ್ರಿಯಿಸಿದ್ದು,. ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಇಸ್ರೇಲ್ ಎಂದಿಗೂ ಹೆಜ್ಬುಲ್ಲಾವನ್ನು ತೊಡೆದುಹಾಕಲು ಸಾಧ್ಯವಾಗುವುದಿಲ್ಲ. ಆದಾಗ್ಯೂ, ಖಮೇನಿ ಹೇಳಿಕೆಯಲ್ಲಿ ಹಸನ್ ನಸ್ರಲ್ಲಾ ಅಥವಾ ಅವರ ಉಪ ಕಮಾಂಡರ್ ಅನ್ನು ಹೆಸರಿಸಿಲ್ಲ. ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಕೂಡ ಬೈರುತ್ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯನ್ನು ಖಂಡಿಸಿದರು.
ಲೆಬನಾನ್ ಮತ್ತು ಹೆಜ್ಬೊಲ್ಲಾದೊಂದಿಗೆ ನಿಲ್ಲುವಂತೆ ಖಮೇನಿ ಜಗತ್ತಿಗೆ ಮನವಿ ಮಾಡಿದ್ದಾರೆ. ಹಿಜ್ಬುಲ್ಲಾ ಇರಾನ್ ಬೆಂಬಲಿತ ಉಗ್ರ ಸಂಘಟನೆ ಎಂದು ಹೇಳಲಾಗುತ್ತದೆ. ಇದು ಇರಾನ್ನಿಂದ ಮಿಲಿಟರಿ ಮತ್ತು ಆರ್ಥಿಕ ಸಹಾಯವನ್ನು ಪಡೆಯುತ್ತಿದೆ. ಹಿಜ್ಬುಲ್ಲಾವನ್ನು ಬೆಂಬಲಿಸಿದ್ದಕ್ಕಾಗಿ ಇರಾನ್ ಹಲವಾರು ಬಾರಿ ಅಮೆರಿಕದಿಂದ ಟೀಕೆಗಳನ್ನು ಎದುರಿಸಿದೆ.