ಆನೇಕಲ್: ಟ್ಯೂಶನ್ ಅಭ್ಯಾಸ ಮುಗಿಸಿ ಮನೆಯ ದಾರಿಯಲ್ಲಿ ಶಾಲಾ ವಾಹನದಿಂದ ಇಳಿಯುವಾಗ ಎಂಟು ವರ್ಷದ ಬಾಲಕನೊಬ್ಬ ಆಯತಪ್ಪಿ ಕೆಳಗೆ ಬಿದ್ದು ಪರಿಣಾಮ ಹಿಂಬದಿ ಚಕ್ರಕ್ಕೆ ಸಿಲುಕಿ ಪೋಷಕರ ಕಣ್ಣೆದುರಿಗೆ ಸಾವನ್ನಪ್ಪಿರುವ ಘಟನೆ ಆನೇಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಸಾಯಿ ಪ್ಯಾರಡೈಸ್ ಲೇವೇಟ್ ನಲ್ಲಿ ನಡೆದಿದೆ .ಎಂಟು ವರ್ಷದ ಬಾಲಕ ದಿವಾನ್ ಸಿಂಗ್ ಮೃತಪಟ್ಟ ಬಾಲಕ
ಇನ್ನು ಉತ್ತರಾಂಚಲ್ ಮೂಲದ ಚಂದ್ರಚೂಡ ಎಂಬವರು ಸುಮಾರು 50 ವರ್ಷಗಳ ಹಿಂದೆ ಹುಬ್ಬಳ್ಳಿ ಬಂದು ನೆಲೆಸಿ ಕೆಲಸ ನಿಮಿತ್ತ ಆನೇಕಲ್ ಪಟ್ಟಣದ ಮೇಡಹಳ್ಳಿ ಸಮೀಪದ ಶ್ರೀ ಸಾಯಿ ಪ್ಯಾರಡೈಸ್ ನಲ್ಲಿ ಕುಟುಂಬ ಸಮೇತ ವಾಸವಾಗಿದ್ದರು . ಚಂದ್ರ ಚೋಡ್ ಇಬ್ಬರು ಮಕ್ಕಳಿದ್ದು ಒಬ್ಬ ಮಗ ಇದೇ ಮೇಡಹಳ್ಳಿ ಸಮೀಪದ ಎಸ್ ಎಸ್ ವಿ ಖಾಸಗಿ ಶಾಲೆಯಲ್ಲಿ ಎರಡನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಸಂಜೆ ಆರು ಗಂಟೆಗೆ ಟ್ಯೂಶನ್ ಮುಗಿಸಿ ಮನೆಗೆ ಬರುವಾಗ
ಇದೇ ಶಾಲೆಯ ವಾಹನದಲ್ಲಿ ಇಳಿಯುತ್ತಿದ್ದಾಗ ವಾಹನ ತರಾತುರಿಯಲ್ಲಿ ಮುಂದೆ ಸಾಗಿತು. ಈ ವೇಳೆ ಚಾಲಕನ ಅಜಾಗರೂಕತೆಯಿಂದ ಮುಗ್ಗರಿಸಿ ಬಿದ್ದ ಮಗುವಿನ ಮೇಲೆ ಶಾಲಾ ವಾಹನದ ಹಿಂದಿನ ಚಕ್ರ ಹರಿದ ಪರಿಣಾಮ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿರುವುದಾಗಿ ತಂದೆ ಚಂದ್ರಚೂಡ್ ಮಾಹಿತಿ ನೀಡಿದರು
ಇನ್ನು ಶಾಲಾ ಆಡಳಿತ ಮಂಡಳಿಯು ದಿವ್ಯ ನಿರ್ಲಕ್ಷ್ಯ ಮತ್ತು ವಾಹನಕ್ಕೆ ಸಿಬ್ಬಂದಿ ನೇಮಿಸದ ಕಾರಣ ಈ ಘಟನೆ ನಡೆದಿದ್ದು, ಶಾಲೆಯ ವಿರುದ್ಧ ಸೂಕ್ರ ಕ್ರಮ ಕೈಗೊಳ್ಳಬೇಕೆಂದು ತಂದೆ ಚಂದ್ರಚೂಡು ಒತ್ತಾಯಿಸಿದ್ದಾರೆ ಇನ್ನು ಮೃತ ಮಗುವಿನ ಪೋಷಕರು ಹಾಗೂ ಸಂಬಂಧಿಕರ ರೋದನ ಮುಗಿಲು ಮುಟ್ಟುವಂತಿತ್ತು.. ಇನ್ನು ಅತ್ತಿಬೆಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಕೆಯನ್ನು ಮುಂದುವರಿಸುತ್ತಿದ್ದಾರೆ.. ಈ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…