ಬೆಂಗಳೂರು:- ಯದ್ವಾತದ್ವಾ ಕರೆಂಟ್ ಬಿಲ್ ನೋಡಿ ಗ್ರಾಹಕರು ಶಾಕ್ ಆಗಿದ್ದು, ಗೃಹ ಜ್ಯೋತಿ ಅನುಷ್ಠಾನ ಮುನ್ನವೇ ಬೆಸ್ಕಾಂ ಗ್ರಾಹಕರ ಬಳಿ ವಸೂಲಿಗೆ ನಿಂತು ಬಿಡ್ತಾ ಎಂಬ ಪ್ರಶ್ನೆ ಉದ್ಭವಿಸಿದೆ. ಇದು ವಿದ್ಯುತ್ ಸರಬರಾಜು ಕಂಪನಿಯ ಲೂಟಿಯೂ.. ಡಿಜಿಟರ್ ಮೀಟರ್ ಲೋಪವೋ..? ದುಪ್ಪಟ್ಟು ಬಿಲ್ ಕೊಟ್ಟ ಬೆಸ್ಕಾಂ ವಿರುದ್ಧ ಭಾರೀ ಆಕ್ರೋಶ ಭುಗಿಲೆದ್ದಿದೆ.
ಕಳೆದ ಕೆಲ ದಿನಗಳಿಂದ ಗ್ರಾಹಕರಿಗೆ ಎಸ್ಕಾಂಗಳು ದುಪ್ಪಟ್ಟು ಬಿಲ್ ನೀಡ್ತಿದ್ದು, ಕಳೆದ ತಿಂಗಳಿಗಿಂತ ಈ ಬಾರಿ ದಿಢೀರ್ ಅಂತ ದುಪ್ಪಟ್ಟು ಬಿಲ್ ಗೆ ಗ್ರಾಹಕರು ಸಿಡಿಮಿಡಿಗೊಂಡಿದ್ದಾರೆ. ಬೆಸ್ಕಾಂ ವ್ಯಾಪ್ತಿಯಲ್ಲಿ 2 ಪಟ್ಟು ವಿದ್ಯುತ್ ಬಿಲ್ ಹೆಚ್ಚಳವಾಗಿದ್ದು, ಭಾರೀ ಜನಾಕ್ರೋಶ ವ್ಯಕ್ತವಾಗಿದೆ. ಮೇ ತಿಂಗಳ ಬಿಲ್ ಕಟ್ಟೋದಿಲ್ಲ, ಸರ್ಕಾರ ಮೋಸ ಮಾಡ್ತಿದೆ ಎಂದು ಗ್ರಾಹಕರು ಹೇಳುತ್ತಿದ್ದಾರೆ.
ಬೆಂಗಳೂರಿನ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲೂ ವಿದ್ಯುತ್ ಬಿಲ್ ದುಬಾರಿ ಆಗಿದ್ದು, ತಿಂಗಳಿಗೆ ,850-900 ರೂ ಬರ್ತಿದ್ದ ಬಿಲ್ ಏಕಾಏಕಿ 1700 ಕ್ಕೆ ಏರಿಕೆ ಆಗಿದೆ. ಬಿಲ್ ನಲ್ಲಿ ಆಗುತ್ತಿರುವ ಗೊಂದಲದಿಂದ ಜನರು ಕಂಗಾಲಾಗಿದ್ದು, ಫ್ರೀ ವಿದ್ಯುತ್ ಅಂತ ಹಣ ವಸೂಲಿ ಮಾಡ್ತಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಗೃಹ ಬಳಕೆಗೂ ವಾಣಿಜ್ಯ ಶುಲ್ಕದ ದುಪ್ಪಟ್ಟು ಬಿಲ್ ನೀಡುತ್ತಿದ್ದು, ವಿದ್ಯುತ್ ಬಿಲ್ ಭಾರದಿಂದ ಗ್ರಾಹಕರು ರೊಚ್ಚಿಗೆದ್ದಿದ್ದಾರೆ. ದುಪ್ಪಟ್ಟು ವಿದ್ಯುತ್ ಬಿಲ್ ಗೆ ಬ್ಯಾಟರಾಯನಪುರ ಕ್ಷೇತ್ರದ ಗ್ರಾಹಕರು ಹೈರಾಣಾಗಿದ್ದು, ಏಕಾಏಕಿ ದುಪ್ಪಟ್ಟು ಬಿಲ್ ನೋಡಿ ಜನತೆ ಕಂಗಾಲಾಗಿದ್ದಾರೆ.