ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರಿಗೆ ನೆನಪಿನ ಶಕ್ತಿ ಕುಂದುತ್ತಿರುವ ಬಗ್ಗೆ ಹಲವು ವರದಿಗಳು ಪ್ರಕಟವಾಗಿತ್ತು. ಇದೇ ಕಾರಣಕ್ಕೆ ಅವರನ್ನು ಅಧ್ಯಕ್ಷ ಸ್ಥಾನದಿಂದ ಹೊರಗುಳಿಯುವಂತೆ ಒತ್ತಡ ಕೇಳಿ ಬಂದಿತ್ತು. ಆ ಬಳಿಕ ಬೈಡನ್ 2024ರ ಅಮೆರಿಕಾ ಅಧ್ಯಕ್ಷಿಯ ಚುನಾವಣೆಯಿಂದ ಹಿಂದೆ ಸರಿದಿದ್ದರು. ಇದೀಗ ಬೈಡನ್ ಗೆ ನೆನಪಿನ ಶಕ್ತಿ ಕುಗ್ಗಿರುವ ಅನುಮಾನಕ್ಕೆ ಮತ್ತೊಂದು ಘಟನೆ ಕಾರಣ ಕಾರಣವಾಗಿದೆ.
ಶ್ವೇತ ಭವನದಲ್ಲಿ ಟೆಕ್ಸಾಸ್ ರೇಂಜರ್ಸ್ ವರ್ಲ್ಡ್ ಸೀರಿಸ್ ವಿಕ್ಟರಿ ಕಾರ್ಯಕ್ರಮ ನಡೆಯುತ್ತಿತ್ತು. ಇದರಲ್ಲಿ ಜೋ ಬೈಡನ್ ಭಾಗಿಯಾಗಿದ್ದರು. ಅಮೇರಿಕಾ ಅಧ್ಯಕ್ಷರಿಗೆ ಟೆಕ್ಸಾಸ್ ರೇಂಜರ್ಸ್ ತಂಡ ನೆನಪಿನ ಕಾಣಿಕೆಯಾಗಿ ಪರ್ಸನಲೈಸ್ಡ್ ಜೆರ್ಸಿ ಹಾಗೂ ಕೌ ಬಾಯ್ ಬೂಟ್ ಗಳನ್ನು ಉಡುಗೊರೆಯಾಗಿ ನೀಡಿತ್ತು.
ಉಡುಗೊರೆ ಸ್ವೀಕರಿಸಿದ ಬಳಿಕ ಜೋ ಬೈಡನ್ ಏನು ಮಾಡಬೇಕೆಂಬುದು ತೋಚದೆ, ಈಗ ನಾನೇನು ಮಾಡಬೇಕು? ಎಂದು ಪ್ರಶ್ನಿಸಿದ್ದಾರೆ.
ಇನ್ನು ಬೈಡನ್ ಸ್ವೀಕರಿಸಿದ್ದ ಜೆರ್ಸಿಯನ್ನು ತೆಗೆದುಕೊಂಡು ಹೋಗಲು ಬಂದ ಸಹಾಯಕ ಸಿಬ್ಬಂದಿ ಬೈಡನ್ ಆಡಿದ ಮಾತು ಕೇಳಿ ಕಕ್ಕಾಬಿಕ್ಕಿಯಾದ ಘಟನೆಯೂ ನಡೆದಿದೆ. ಜೆರ್ಸಿಯನ್ನು ಜೋಪಾನವಾಗಿ ತೆದುಕೊಂಡು ಹೋಗಲು ಬಂದ ಸಿಬ್ಬಂದಿಗೆ ಜೋ ಬೈಡನ್, ನನ್ನ ಜೆರ್ಸಿಯನ್ನೇಕೆ ಕಸಿಯುತ್ತಿದ್ದೀರ ? ಎಂದು ಪ್ರಶ್ನಿಸಿದ್ದಾರೆ. ಇದಷ್ಟೇ ಅಲ್ಲದೇ ಈ ಹಾಲ್ ನಲ್ಲಿ ಹಲವು ಸಮಾರಂಭಗಳಿಗೆ ಸಾಕ್ಷಿಯಾಗಿದ್ದರೂ ಅಧ್ಯಕ್ಷ ಜೋ ಬೈಡನ್ ದಾರಿಗಾಗಿ. ಗೊಂದಲಕ್ಕೀಡಾಗಿ ಎರಡೂ ಕೈ ಎತ್ತಿ ತಡಬಡಾಯಿಸಿದ್ದೂ ಸಹ ಬೈಡನ್ ಸ್ಮೃತಿ ಶಕ್ತಿ ಕುಗ್ಗಿರುವುದನ್ನು ತೋರಿಸುತ್ತಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ. ತಕ್ಷಣವೇ ಎಚ್ಚೆತ್ತ ಶ್ವೇತ ಭವನ ಸಿಬ್ಬಂದಿ ಅಧ್ಯಕ್ಷರು ಈಗ ನಿರ್ಗಮಿಸುತ್ತಿದ್ದಾರೆ ಎಂದು ಘೋಷಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
“ಜೋ ಬಿಡೆನ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅರ್ಹರಲ್ಲದಿದ್ದರೆ, ಅವರು ಅಧ್ಯಕ್ಷರಾಗಿ ಸೇವೆ ಸಲ್ಲಿಸಲು ಅರ್ಹರಲ್ಲ. ಅವರು ಕೂಡಲೇ ಕಚೇರಿಗೆ ರಾಜೀನಾಮೆ ನೀಡಬೇಕ ಎಂದು ಹೌಸ್ ಸ್ಪೀಕರ್ ಮೈಕ್ ಜಾನ್ಸನ್ ಇತ್ತೀಚೆಗೆ ಹೇಳಿಕೆ ನೀಡಿದ್ದರು.