ಬೆಂಗಳೂರು: ಕೋಟಿ ಕೋಟಿ ತೆರಿಗೆ ಬಾಕಿ ಉಳಿಸಿಕೊಂಡ ಬೆಂಗಳೂರಿನ ಮಲ್ಲೇಶ್ವರಂನ ಪ್ರತಿಷ್ಠಿತ ಮಂತ್ರಿ ಮಾಲ್ ಗೆ ಇಂದು ಬಿಬಿಎಂಪಿ ಅಧಿಕಾರಿಗಳು ಬೀಗ ಹಾಕಿದ್ದಾರೆ. ಮೂರು ವಾರಗಳ ಹಿಂದೆ ನೋಟಿಸ್ ನೀಡಿದ್ದರೂ ಸಹ ಮಂತ್ರಿ ಮಾಲ್ ಆಡಳಿತ ವರ್ಗದವರಿಂದ ಯಾವುದೇ ರೀತಿ ಪ್ರತಿಕ್ರಿಯೆ ಸಿಕ್ಕಿಲ್ಲ.
ಸುಮಾರು 53 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಬಾಕಿ ವಸೂಲಿಗೆ ಡಿಮ್ಯಾಂಡ್ ನೋಟೀಸ್ ನೀಡಿದ್ದರು ಸಹ ಪಾವತಿ ಮಾಡದ ಹಿನ್ನಲೆ ಕಾನೂನು ತಜ್ಞರ ಸಲಹೆ ಮೇರೆಗೆ ಮಂತ್ರಿ ಮಾಲ್ ಅನ್ನು ಸೀಝ್ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಮಾಲ್ ನ ಆಡಳಿತ ಮಂಡಳಿಯವರು ಮಾತ್ರ ನಮಗೆ ಯಾವುದೇ ನೋಟೀಸ್ ನೀಡದೆ ಮಾಲ್ ಗೆ ಬೀಗ ಹಾಕಿದ್ದಾರೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನೂ ಮಾಲ್ ನಲ್ಲಿ ಸಮಯ ಕಳೆಯಲು ಬಂದ ನೂರಾರು ಜನ ಸಾರ್ವಜನಿಕರು ಮಾಲ್ ನ ಒಳ ಹೋಗಲಾಗದೆ ಹೊರಗಡೆಯೆ ನಿಂತು ಕಾಯುತ್ತಿದ್ದರು.
ಪ್ರತಿಷ್ಠಿತ ಮಂತ್ರಿ ಮಾಲ್ ಗೆ ಬಿಬಿಎಂಪಿ ಸೌಲಭ್ಯ ಬೇಕು..ಆದ್ರೆ ತೆರಿಗೆ ಕಟ್ಟೋಕೆ ಮಾತ್ರ ಕಳ್ಳಾಟ ಕೋಟ ಕೋಟಿ ಲಾಭಗೊಳಿಸೋ ಮಂತ್ರಿ ಮಾಲ್ ಬಳಿ ಪಾಲಿಕೆಗೆ ತೆರಿಗೆ ಕಟ್ಟೋಕೆ ದುಡ್ಡು ಇಲ್ವಾ 51 ಕೋಟಿ ತೆರಿಗೆ ಕಟ್ಟೋಕೆ ಪ್ರತಿಷ್ಠಿತ ಮಾಲ್ ಕಳ್ಳಾಟ ಟ್ಯಾಕ್ಸ್ ಕಟ್ಟಿಲ್ಲ ಅಂದರೆ ಮತ್ತೆ ಬೀಗ ಹಾಕೋ ಎಚ್ಚರಿಕೆ ಕೊಟ್ಟ ಬಿಬಿಎಂಪಿ
2018 ರಿಂದ ಬಿಬಿಎಂಪಿ ಗೆ ಆಸ್ತಿ ತೆರಿಗೆ ಕಟ್ಟದೆ ವಂಚಿಸಿರೋ ಮಂತ್ರಿ ಮಾಲ್ ಪದೇ ಪದೇ ಡೆಡ್ಲೈನ್ ನೀಡಿದ್ರೂ ಆಸ್ತಿ ತೆರಿಗೆ ಕಟ್ಟದ ಮಂತ್ರಿ ಮಾಲ್ ಆಡಳಿತ ಮಂಡಳಿ ಆಸ್ತಿ ತೆರಿಗೆ ವಂಚಕ ಮಂತ್ರಿ ಮಾಲ್ ವಿರುದ್ದ ಬಿಬಿಎಂಪಿ ಮತ್ತೆ ಸಮರ ಸಾರುತ್ತಾ ಈ ಹಿಂದೆ ಬಿಬಿಎಂಪಿ ಡೆಡ್ಲೈನ್ ಗೆ ಕ್ಯಾರೆ ಎಂದಿದ್ದ ಮಂತ್ರಿಮಾಲ್
2018 ರಿಂದ ಇಲ್ಲಿಯವರಿಗೆ 51 ಕೋಟಿ ಬಾಕಿ ಉಳಿಸಿಕೊಂಡ ಮಾಲ್ ಕಳೆದ ವರ್ಷವೂ ತೆರಿಗೆ ಕಟ್ಟದ ಕಾರಣ ಮಂತ್ರಿ ಮಾಲ್ನ್ನ ಕ್ಲೋಸ್ ಮಾಡಿಸಿದ್ದ ಪಾಲಿಕೆ ಡೆಡ್ಲೈನ್ ಮುಗಿಯುತ್ತಾ ಬಂದಿದ್ರೂ ಆಸ್ತಿ ತೆರಿಗೆ ಕಟ್ಟದ ಮಂತ್ರಿ ಮಾಲ್.. ಆಸ್ತಿ ತೆರಿಗೆ ಕಟ್ಟಿಲ್ಲ ಅಂದರೆ ಬೀಗ ಜಡಿಯುವ ಎಚ್ಚರಿಕೆ ಕೊಟ್ಟ ಬೃಹತ್ ಪಾಲಿಕೆ ಆಸ್ತಿ ತೆರಿಗೆ ವಂಚಕ ಮಂತ್ರಿ ವಿರುದ್ಧ ಮತ್ತೆ ಸಮರ ಸಾರೋಕೆ ಮುಂದಾದ ಪಾಲಿಕೆ ಮಂತ್ರಿ ಮಾಲ್ ಕ್ಲೋಸ್ ಮಾಡಿಸಿರೋ ಬಿಬಿಎಂಪಿ