ಅಮಿತಾಭ್ ಬಚ್ಚನ ಕುಟುಂಬದ ಸುದ್ದಿ ಆಗಾಗ ಐಶ್ವರ್ಯಾ ಕಾರಣದಿಂದ ಸದ್ದು ಮಾಡುತ್ತಲೆ ಇರುತ್ತದೆ. ಇತ್ತೀಚೆಗೆ ಐಶ್ವರ್ಯಾ ಹಾಗೂ ನವ್ಯಾ ಮಧ್ಯೆ ಎಲ್ಲವು ಸರಿ ಎನ್ನಲಾಗಿತ್ತು. ಇದೀಗ ಅಮಿತಾಭ್ ಬಚ್ಚನ್ ಹಾಗೂ ಅವರ ಸೊಸೆ ಐಶ್ವರ್ಯಾ ರೈ ಬಚ್ಚನ್ ಮಧ್ಯೆ ಯಾವುದೂ ಸರಿ ಇಲ್ಲ ಎನ್ನುವ ಸುದ್ದಿ ಕೇಳಿ ಬಂದಿದೆ. ಈ ಕಾರಣಕ್ಕೆ ಅಭಿಷೇಕ್ ಹಾಗೂ ಐಶ್ವರ್ಯಾ ವಿಚ್ಛೇದನ ಪಡೆಯುತ್ತಾರೆ ಎನ್ನಲಾಗಿತ್ತು. ಆದರೆ, ಕುಟುಂಬದವರು ಹಲವು ಬಾರಿ ಒಟ್ಟಾಗಿ ಕಾಣಿಸಿಕೊಂಡ ಬಳಿಕ ಈ ಸುದ್ದಿ ತಣ್ಣಗಾಯಿತು. ಈಗ ಮತ್ತೆ ಇದೇ ಚರ್ಚೆ ಶುರುವಾಗಿದೆ. ಇದಕ್ಕೆ ಕಾರಣವಾಗಿತ್ತು ಅಮಿತಾಭ್ ಅವರ ಪೋಸ್ಟ್.
2005ರಲ್ಲಿ ರಿಲೀಸ್ ಆದ ಬಂಟಿ ಔಟ್ ಬಬ್ಲಿ ಸಿನಿಮಾದಲ್ಲಿ ‘ಕಜರಾ ರೇ..’ ಸಾಂಗ್ ಸೂಪರ್ ಹಿಟ್ ಆಗಿತ್ತು. ಇದರಲ್ಲಿ ಅಭಿಷೇಕ್ ಬಚ್ಚನ್, ಅಮಿತಾಭ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಇದ್ದರು. ಈ ಹಾಡಿನಲ್ಲಿ ಸಾಕಷ್ಟು ಎನರ್ಜಿಯೊಂದಿಗೆ ಮೂವರು ಡ್ಯಾನ್ಸ್ ಮಾಡಿದ್ದರು. ಈ ಚಿತ್ರ ಬಿಡುಗಡೆ ಆಗಿ 19 ವರ್ಷ ಕಳೆದ ಹಿನ್ನೆಲೆಯಲ್ಲಿ ಫ್ಯಾನ್ಸ್ ಈ ಚಿತ್ರವನ್ನು, ಸಿನಿಮಾದ ಹಾಡನ್ನು ನೆನಪಿಸಿಕೊಂಡಿದ್ದಾರೆ.
ಈ ಟ್ವೀಟ್ನ ಅಮಿತಾಭ್ ರೀಟ್ವೀಟ್ ಮಾಡಿದ್ದಾರೆ. ‘ಈ ಹಾಡು ಎಷ್ಟು ಜನಪ್ರಿಯವಾಯಿತು ಎಂದರೆ ಅದು ಇನ್ನೂ ಜನರಿಂದ ಮೆಚ್ಚುಗೆ ಹಾಗೂ ಪ್ರೀತಿ ಪಡೆಯುತ್ತಿದೆ. ಮಗನ ಜೊತೆ ಡ್ಯಾನ್ಸ್ ಮಾಡಿದ್ದು ಅತ್ಯುತ್ತಮ ಕ್ಷಣ’ ಎಂದು ಅಮಿತಾಭ್ ಟ್ವೀಟ್ ಮಾಡಿದ್ದಾರೆ. ಆದರೆ, ಈ ಪೋಸ್ಟ್ನಲ್ಲಿ ಅವರು ಐಶ್ವರ್ಯಾ ಅವರನ್ನು ಎಲ್ಲಿಯೂ ಉಲ್ಲೇಖ ಮಾಡಿಲ್ಲ. ಇದು ಅನೇಕರ ಕೋಪಕ್ಕೆ ಕಾರಣ ಆಗಿದೆ.
‘ಕಜರಾರೇ ಹಾಡಿನಲ್ಲಿ ಐಶ್ವರ್ಯಾ ಕೂಡ ಇದ್ದರು. ಈ ಹಾಡಿನಲ್ಲಿ ಐಶ್ವರ್ಯಾ ಮುಖ್ಯಪಾತ್ರಧಾರಿ. ನೀವಿಬ್ಬರು (ಅಭಿಷೇಕ್-ಅಮಿತಾಭ್) ಸಪೋರ್ಟಿಂಗ್ ಡ್ಯಾನ್ಸರ್ಗಳು ಅಷ್ಟೇ’ ಎಂದು ಕೆಲವರು ಟೀಕೆ ಮಾಡಿದ್ದಾರೆ. ಇನ್ನೂ ಕೆಲವರು ‘ಐಶ್ವರ್ಯಾ-ಅಮಿತಾಭ್ ಮಧ್ಯೆ ಯಾವುದೂ ಸರಿ ಇಲ್ಲ. ಎಲ್ಲವೂ ತೋರಿಕೆಗೆ’ ಎಂದಿದ್ದಾರೆ.