ಚಳಿಗಾಲ ಬಂದ್ರೆ ಸಾಕು ಸಿಂಗಲ್ ಆಗಿರೋರು ಪೇಚಾಡೋ ಕಾಲ. ನಂಗೂ ಲೈಫ್ ಪಾರ್ಟನರ್ ಇರ್ಬಾದಿತ್ತಪ್ಪಾ ಅಂತ ಹಂಬಲಿಸೋ ಸಮಯ. ವಿಂಟರ್ ಸೀಸನ್ನ ರೋಮ್ಯಾಂಟಿಕ್ ವೆದರ್ ಎಂಥವರನ್ನೂ ಕಂಗೆಡಿಸಿಬಿಡುತ್ತದೆ. ಆದ್ರೆ ಥರಗುಟ್ಟಿಸೋ ಚಳಿಯಲ್ಲಿ ಸೆಕ್ಸ್ ಹೇಗೆ..? ತಜ್ಞರು ಕೊಡುವ ಸಲಹೆ ಏನು? ಇಲ್ಲಿದೆ ನೋಡಿ ಉತ್ತರ.
ಸಾಮಾನ್ಯವಾಗಿ ಚಳಿಗಾಲದಲ್ಲಿ ಬೆಚ್ಚಗಿರಲು ಎಲ್ಲರೂ ಬಯಸುತ್ತಾರೆ. ಈ ಸಮಯದಲ್ಲಿ ದೈಹಿಕ ಸಂಪರ್ಕ ಹೊಂದುವುದು ಯಾವಾಗಲೂ ವಿಶೇಷವಾಗಿರುತ್ತದೆ.
ಏಕೆಂದರೆ ಇದು ಶಾಖದಿಂದ ತುಂಬಿರುತ್ತದೆ. ಈ ಸಮಯದಲ್ಲಿ ನಿಮ್ಮ ಸಂಗಾತಿಯ ದೇಹದ ಉಷ್ಣತೆಯನ್ನು ನೀವು ಪಡೆಯುತ್ತೀರಿ. ಇದು ನಿಮಗೆ ಆನಂದವನ್ನು ನೀಡುತ್ತದೆ.
ಅನಾರೋಗ್ಯ: ಚಳಿಗಾಲದಲ್ಲಿ ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯು ದುರ್ಬಲವಾಗಿರುವುದರಿಂದ, ಈ ಸಮಯದಲ್ಲಿ ಮಿಲನ ಹೊಂದುವುದು ಆರೋಗ್ಯಕರ ವಿಚಾರವಾಗಿದೆ.
ಮುದ್ದಾಡುವುದು: ಚಳಿಗಾಲದಲ್ಲಿ ಮಿಲನದ ವೇಳೆ ಮುದ್ದಾಡುವುದು ಉತ್ತಮ ಅನುಭವ ನೀಡುವುದರ ಜೊತೆಗೆ ದೇಹವನ್ನು ಬೆಚ್ಚಗಾಗಿಸಲು ಉತ್ತಮ ಮಾರ್ಗವಾಗಿದೆ.
ವಿನೋದಮಯ: ಚಳಿಗಾಲದಲ್ಲಿ ಲೈಂಗಿಕತೆಯು ಹೆಚ್ಚು ಆರಾಮದಾಯಕ ಮತ್ತು ವಿನೋದಮಯವಾಗಿರುತ್ತದೆ. ಅಲ್ಲದೇ ಈ ಸಮಯದಲ್ಲಿ ದಂಪತಿ ಉಷ್ಣತೆ ಪಡೆಯುವುದರ ಜೊತೆಗೆ ಬೆಚ್ಚಗಿರುತ್ತಾರೆ.
ಸಾಕ್ಸ್ ಧರಿಸಿ ಮಿಲನ: ಸಾಕ್ಸ್ ಧರಿಸಿ ಮಿಲನ ಹೊಂದುವುದು ಬಹಳ ವಿಭಿನ್ನವಾಗಿರುತ್ತದೆ. ವಿಶೇಷವಾಗಿ ಮಹಿಳೆಯರು ಹೀಗೆ ಮಾಡುವುದರಿಂದ ಬೇಗನೆ ಪರಾಕಾಷ್ಠೆಯನ್ನು ಪಡೆಯಲು ಸಾಧ್ಯವಾಗುತ್ತದೆ