ಬೆಂಗಳೂರು: ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಪೆನ್ಡ್ರೈವ್ ನೀಡಲಿ. ಅದರಲ್ಲಿ ಏನು ಇದೆ ಎಂಬುವುದನ್ನು ನಾವು ತನಿಖೆ ಮಾಡುತ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪೆನ್ ಡ್ರೈವ್ ವಿಚಾರವಾಗಿ ತಿರುಗೇಟು ನೀಡಿದರು. ಕುಮಾರಸ್ವಾಮಿ ಹೆದರಿಸುವುದಕ್ಕೆ ಟ್ರೈ ಮಾಡುತ್ತಿದ್ದಾರಾ? ಬ್ಲಾಕ್ ಮೇಲ್ ಮಾಡಲು ಪ್ರಯತ್ನ ಮಾಡುತ್ತಿದ್ದಾರಾ? ಅಥವಾ ವಿರೋಧ ಪಕ್ಷದ ನಾಯಕ ಆಗಲು ಟ್ರೈ ಮಾಡುತ್ತಿದ್ದಾರಾ? ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಅವರಲ್ಲಿ ಇರುವ ಪೆನ್ಡ್ರೈವ್ನಲ್ಲಿ ಏನಿದೆ ಹಾಗೂ ಅದರಲ್ಲಿರುವ ಕಂಟೆಂಟ್ ಏನು ಎಂಬುವುದರ ಬಗ್ಗೆ ನನಗೆ ಗೊತ್ತಿಲ್ಲ. ಬಿಜೆಪಿಗರು ತಾನೆ ಹೇಳಿದ್ದು ಪೆನ್ ಡ್ರೈವ್ ನಲ್ಲಿ ಏನೆನೋ ಇದೆ ಅಂತ. ಆದರೆ ಎಸ್ಪಿ ರೋಡ್ ಗೆ ಹೋದರೆ ಅಂತಹ ಸಾವಿರಾರು ಪೆನ್ಡ್ರೈವ್ ಸಿಗುತ್ತದೆ ಎಂದರು.
ಸಾಕ್ಷಿ ಏನಿದೆ ಅಂತ ತೊರಿಸುವುದು ಮುಖ್ಯವಾಗುತ್ತದೆ. ಅಂದು ಪಿಎಸ್ಐ ಹಗರಣದ ಸಾಕ್ಷಿ ಕೇಳಿದ್ರು, ಸಾಕ್ಷಿ ತೊರಿಸಿದ್ರೆ, ಪ್ರಿಯಾಂಕ್ ಖರ್ಗೆ ಹುಷಾರಾಗಿರಿ, ತನಿಖೆಯಲ್ಲಿ ನಿಮ್ಮ ಹೆಸರು ಬರುತ್ತೆ ಎಂದು ಹೇಳಿದರು. ಅಂದು ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರ ತನಿಖೆಗೆ ಕೊಡಬಹುದಿತ್ತು. ಇವಾಗ ನಾವು ಕೊಟ್ಟರೆ ರಾಜಕೀಯ ದ್ವೇಷ ಅಂತಿದ್ದಾರೆ ಎಂದರು.
ಉಡುಪಿ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬಿಜೆಪಿಗರು ನಿರ್ಧಾರ ಮಾಡಬೇಕು ಯಾರನ್ನು ನಂಬುತ್ತಾರೆ ಎಂದು. ಬಿಜೆಪಿ ಕಾಲದ ಅಧಿಕಾರಿಗಳು ಈಗಲೂ ಅಲ್ಲೇ ಇದ್ದಾರೆ. ಪ್ರಕರಣದಲ್ಲಿ ಯಾವುದೇ ರೀತಿಯ ಕ್ರಿಮಿನಲ್ ಉದ್ದೇಶ ಇರಲಿಲ್ಲ ಹಾಗೂ ಎಲ್ಲೂ ವಿಡಿಯೋ ಸಿಕ್ಕಿಲ್ಲ ಎಂದು ಸ್ವತಃ ಮಹಿಳಾ ಆಯೋಗದ ಸದಸ್ಯೆ ಖುಷ್ಬು ಹೇಳಿದ್ದಾರೆ. ಹಾಗಿದ್ದರೂ, ವಿಡಿಯೋ ಓಡಾಡುತ್ತಿದೆ ಎಂದು ಬಿಜೆಪಿ ಆರೋಪ ಮಾಡುತ್ತಿದೆ. ಹಾಗಾದರೆ ಬಿಜೆಪಿ ಅವರು ವಿಡಿಯೋವನ್ನು ತೊರಿಸಲಿ, ವಿಡಿಯೋ ಯಾವ ಸಾಮಾಜಿಕ ಜಾಲತಾಣದಲ್ಲಿದೆ ಎಂದು ತಿಳಿಸಲಿ ಎಂದು ಸವಾಲು ಹಾಕಿದರು.
![Demo](https://prajatvkannada.com/wp-content/uploads/2023/08/new-Aston-Band.jpeg)