ಬೆಂಗಳೂರು: ಬೆಂಗಳೂರನ್ನೇ ಬೆಚ್ಚಿ ಬೀಳಿಸುವ ಘಟನೆ ನಡೆಯುವ ಮುನ್ನವೇ ಪೊಲೀಸರು ಶಂಕಿತ ಉಗ್ರರನ್ನ ಹಿಡಿದು ಹೆಡೆಮುರಿ ಕಟ್ಟಿದ್ದಾರೆ ಆದರೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದುಕೊಂಡೇ ತನ್ನೆಲ್ಲ ಭಯಾನಕ ಕೃತ್ಯಗಳನ್ನ ಎಸೆಯುತ್ತಿದ್ದ ಇದಕ್ಕೆ ಜೈಲಾಧಿಕಾರಿಗಳ ಕುಮ್ಮಕ್ಕು ಸಹ ಇದೇಯಾ ಎಂಬುದು ಎಲ್ಲರ ಪ್ರಶ್ನೆಯಾಗಿತ್ತು ಅದಕ್ಕೆ ಇದೇ ಸಾಕ್ಷಿಯಾಗಿದೆ ನೋಡಿ..
ಬೆಂಗಳೂರಿನ ಸೆಂಟ್ರಲ್ ಜೈಲೋ ಅಥವಾ ಹಣ ಮಾಡುವ ಅಡ್ಡೆಯೋ? ಇಂಥಹದೊಂದು ಪ್ರಶ್ನೆ ಪರಪ್ಪನ ಅಗ್ರಹಾರ ಜೈಲಿನ ಪರಿಸ್ಥಿತಿ ನೋಡಿದಾಗ ನಮ್ಮಲ್ಲೆ ಹುಟ್ಟುವ ಪ್ರಶ್ನೆಯಾಗಿದೆ.
ಪರಪ್ಪನ ಅಗ್ರಹಾರ ಜೈಲನ್ನೆ ಎಲ್ ಇ ಟಿ ಉಗ್ರ ಟಿ ನಾಜಿರ್ ನ ಬಿಸಿನೆಸ್ ಅಡ್ಡೆ ಮಾಡಿಕೊಂಡಿದ್ದಾನಂತೆ. ಜೈಲಲ್ಲಿ ಕುಳಿತುಕೊಂಡೇ ಉಗ್ರ ಟಿ ನಾಜಿರ್ ದಿನಕ್ಕೆ ನಾಲ್ಕೈದು ಸಾವಿರ ಸಂಪಾದನೆ ಮಾಡ್ತಿದ್ದಾನೆ.
ಜೈಲಲ್ಲಿ ಬಟ್ಟೆ, ಡ್ರೈ ಫ್ರೂಟ್ಸ್ , ಸ್ವೀಟ್ಸ್ ಮಾರಾಟ ಮಾಡ್ತಿರೊ ಟಿ ನಾಜಿರ್ ಉಗ್ರರಿಗೆ ನಿಗಧಿಯಾಗಿರೊ ಹೈ ಸೆಕ್ಯುರಿಟಿ ಸೆಲ್ ಬಿಟ್ಟು ಬೇರೆ ಕಡೆ ಸಹ ಓಡಾಟ ನಡೆಸ್ತಿದ್ದಾನಂತೆ.
ವಿಚಾರಣಾಧೀನ ಕೈದಿಗಳನ್ನ ತನ್ನ ರೂಂ ಗೆ ಹಾಕಿಸಿಕೊಳ್ಳೋ ನಾಜಿರ್ ಅವ್ರಿಂದ ಬ್ಯುಸಿನೆಸ್ ಮಾಡಿಸ್ತಾನೆ.
ಹೊರಗಡೆಯಿಂದ ಡ್ರೈ ಫ್ರೂಟ್ಸ್ , ಬಟ್ಟೆ ತರಿಸೊ ಟಿ ನಜೀರ್ ಇವುಗಳನ್ನ ಜೈಲಿನ ಖೈದಿಗಳಿಗೆ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಿ ಹಣ ಸಂಪಾದಾನೆ ಮಾಡ್ತಾನೆ. ದುರಂತ ಅಂದ್ರೆ ಉಗ್ರರ ಸೆಲ್ ಮತ್ತು ಅವರ ಸಂಪರ್ಕ ಯಾರೂ ಸಿಗದಂತೆ ನೋಡಿಕೊಳ್ಳಬೇಕು. ಆದ್ರೆ ಜೈಲಲ್ಲಿ ಇದ್ಯಾವೂ ಆಗ್ತಿಲ್ಲ. ಕೇವಲ ಹಣದಾಸೆಗೆ ಇಲ್ಲ ಫ್ರೀ ಆಗಿ ಬಿಟ್ಟಿದೆ.
ಇನ್ನೂ ದುರಂತದ ಸಂಗತಿ ಅಂದ್ರೆ ಪರಪ್ಪನ ಅಗ್ರಹಾರ ಜೈಲಲ್ಲಿ 30 ಕ್ಕು ಹೆಚ್ಚು ಹಿಂದೂಗಳನ್ನ ಮುಸ್ಲೀಂ ಆಗಿ ಕನ್ವರ್ಟ್ ಮಾಡಿದ್ದಾನಂತೆ. ಕೆಲ ವಿಚಾರಣಾಧಿನಬಕೈದಿಗಳು ಮೀಸೆ ಬೋಳಿಸಿಕೊಂಡು ಗಡ್ಡ ಬಿಟ್ಟುಕೊಂಡು ಥೇಟ್ ಮುಸ್ಲೀಂ ಗಳ ರೀತಿ ಆಗಿದ್ದಾರಂತೆ. ಮುಸ್ಲೀಂ ಆರೋಪಿಗಳು , ಕೇರಳದವರು ಬಂದ್ರೆ ತನ್ನ ರೂಮ್ ಗೆ ಹಾಕಿಸಿಕೊಳ್ಳೋ ನಾಜಿರ್
ಉಗ್ರರಿಗೆ ನಿಗದಿಯಾಗಿರುವ ಹೈ ಸೆಕ್ಯುರಿಟಿ ಸೆಲ್ ನಲ್ಲೇ ಉಳಿಸಿಕೊಳ್ತಾನಂತೆ. ಇದಕ್ಕಾಗಿ 70000 ದ ವರೆಗೆ ಹಣ ಚಾರ್ಜ್ ಮಾಡ್ತಾನೆ. ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ಜುನೈದ್ ನ ಕೂಡ ನಾಜಿರ್ ಇದೇ ಜೈಲಲ್ಲ ತನ್ನ ರೂಮ್ ನಲ್ಲಿ ಇರಿಸಿಕೊಂಡೇ ಉಗ್ರ ಚಟುವಟಿಕೆಗೆ ಪ್ರೇರೆಪಿಸಿರೋದು.
ಟಿ ನಜೀರ್ ನ ಎಲ್ಲಾ ಕರ್ಮಕಾಂಡಗಳಿಗೆ ಜೈಲು ಸಿಬ್ಬಂಧಿಯದ್ದೇ ಶ್ರೀ ರಕ್ಷೆಯಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದ್ದು ಇದೀಗ ಪೊಲೀಸರು ಜೈಲಾಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಂಡು ತಕ್ಕ ಪಾಠ ಕಲಿಸಬೇಕಾಗಿದೆ.