ವಿಶ್ವಸಂಸ್ಥೆಯಲ್ಲಿ ಕನ್ನಡ ಕಹಳೆಯನ್ನ ಮೊಳಗಿಸಿರುವ ವಿಚಾರವಾಗಿ ನಟ ಕಂ ನಿರ್ದೇಶಕ ರಿಷಬ್ ಶೆಟ್ಟಿ ಮತ್ತೆ ಸುದ್ದಿಯಲ್ಲಿದ್ದಾರೆ. ವಿಶ್ವಸಂಸ್ಥೆಯ ವಾರ್ಷಿಕ ಸಭೆ ಕೆಲವು ದಿನಗಳಿಂದ ನಡೆಯುತ್ತಿದ್ದು, ಮಾನವ ಹಕ್ಕು ಸಂರಕ್ಷಣೆ ಷರತ್ತಿನ 28ನೇ ಸಭೆಯಲ್ಲಿ ಪರಿಸರ ಸಂರಕ್ಷಣೆ ವಿಷಯವಾಗಿ ರಿಷಬ್ ಕನ್ನಡದಲ್ಲಿಯೇ ಭಾಷಣ ಮಾಡಿದ್ದಾರೆ. ಈ ಕುರಿತ ಸಣ್ಣ ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.
ಕೆಲ ದಿನಗಳ ಹಿಂದೆ ರಿಷಬ್, ಸಿಎಂ ಬೊಮ್ಮಾಯಿ ಅವರನ್ನ ಭೇಟಿಯಾಗಿದ್ದರು. ಅನೇಕ ಕಾಡುಗಳಿಗೆ ಭೇಟಿ ನೀಡಿ, ಕಾಡಂಚಿನ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದರು. ಈ ಎಲ್ಲಾ ಸಮಸ್ಯೆಗಳನ್ನ ಪರಿಹರಿಸುವುದಾಗಿ ಸಿಎಂ ಬೊಮ್ಮಾಯಿ ಅವರು ಭರವಸೆ ನೀಡಿದ್ದರು. ಈ ಬಗ್ಗೆ ಮತ್ತೆ ವಿಶ್ವಸಂಸ್ಥೆಯಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ರಿಷಬ್ ಮಾತನಾಡಿದ್ದಾರೆ.
ವಿಶ್ವಸಂಸ್ಥೆಯ ವೇದಿಕೆಯಲ್ಲಿ ಕನ್ನಡ ದನಿ ಪಸರಿಸುವ ಕಾರ್ಯವನ್ನು ರಿಷಬ್ ಶೆಟ್ಟಿ ಮಾಡಿದರು. ಈ ಬಾರಿ ಸರಳ ಭಾರತೀಯ ಉಡುಗೆ ಬಿಳಿಯ ಬಣ್ಣದ ಖುರ್ತಾ ಧರಿಸಿ ಅದಕ್ಕೊಪ್ಪುವ ನೀಲಿ ಬಣ್ಣದ ವೇಸ್ ಕೋಟು ಧರಿಸಿದ್ದ ರಿಷಬ್ ಶೆಟ್ಟಿ, ಭಾಷಣ ಆರಂಭಿಸಿದರು. ಈ ಸಭೆಯಲ್ಲಿ ಭಾಷಣಕಾರರಿಗೆ ಸೀಮಿತ ಸಮಯ ನೀಡುವ ಕಾರಣ, ತುಸು ವೇಗವಾಗಿ ಭಾಷಣ ಓದಲು ಆರಂಭಿಸಿದ ರಿಷಬ್, ನಮಸ್ಕಾರ ನಾನು ರಿಷಬ್ ಶೆಟ್ಟಿ. ಪರಿಸರ ಸಂರಕ್ಷಣೆಗಾಗಿ ಕಳೆದ ಒಂದು ದಶಕಕ್ಕಿಂತಲೂ ಹೆಚ್ಚು ಕಾಲದಿಂದ ತಳಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತದ ಇಕೋಫಾರ್ಮ್ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ಪರಿಸರ ಸ್ವಚ್ಛತೆ ಕಾಪಾಡುವುದು ಸದ್ಯದ ಅಗತ್ಯ. ಒಬ್ಬ ನಟ, ನಿರ್ದೇಶಕನಾಗಿ ತಳಮಟ್ಟದಲ್ಲಿ ಪರಿಣಾಮ ಬೀರಬೇಕು ಎಂಬುದು ನನ್ನ ಉದ್ದೇಶ ಎಂದು ನಟ ರಿಷಬ್ ಶೆಟ್ಟಿ ಮಾತನಾಡಿದ್ದಾರೆ.
.ಅಂತಾರಾಷ್ಟ್ರೀಯ ವೇದಿಕೆಯಲ್ಲಿ ರಿಷಬ್ ಕನ್ನಡ ಮಾತನಾಡಿರೋದು ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ.