ಬೆಂಗಳೂರು : ಸೋತ RCB, ಗೆದ್ದ LSG. ಇದು ಆರ್ಸಿಬಿಯ ಹೊಸ ಅಧ್ಯಾಯವೇ..? ಐಪಿಎಲ್ನಲ್ಲಿ ಬಹುತೇಕ ಎಲ್ಲಾ ತಂಡಗಳು ತವರು ನೆಲದಲ್ಲಿ ಗೆಲುವಿನ ನಗೆ ಬೀರಿದರೆ, ಆರ್ಸಿಬಿ ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಸಾರಥ್ಯದ ಲಕ್ನೋ ಭರ್ಜರಿ ಗೆಲುವು ದಾಖಲಿಸಿದೆ. LSG ನೀಡಿದ್ದ 182 ರನ್ ಗಳ ಟಾರ್ಗೆಟ್ ಬೆನ್ನಟ್ಟಿದ RCB, ನಿಗದಿತ 19.3 ಓವರ್ ಗಳಲ್ಲಿ 153 ರನ್ ಗಳಿಗೆ ಆಲೌಟ್ ಆಯಿತು.
ಆರ್ಸಿಬಿ ಪರ ಲ್ಯಾಮೋರ್ 33, ಪಾಟೀದಾರ್ 29, ವಿರಾಟ್ ಕೊಹ್ಲಿ 22 ರನ್ ಗಳಿಸಿದರು. LSG ಪರ ಮಾಯಾಂಕ್ ಯಾದವ್ 3 ವಿಕೆಟ್ ಪಡೆದು ಮಿಂಚಿದರು. ಇದರೊಂದಿಗೆ RCB ಮೂರನೇ ಸೋಲು ಕಂಡರೆ, LSG ಎರಡನೇ ಗೆಲುವು ದಾಖಲಿಸಿತು.
ಡಿ ಕಾಕ್, ಪೂರನ್ ಅಬ್ಬರ
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ LSG ಪರ ಡಿ ಕಾಕ್ ಹಾಗೂ ಪೂರನ್ ಅಬ್ಬರಿಸಿದರು. ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 181 ರನ್ ಗಳಿಸಿತು. ಡಿ ಕಾಕ್ 81, ಪೂರನ್ ಅಜೇಯ 40*, ಸ್ಟೋನಿಸ್ 24, ಕೆ.ಎಲ್. ರಾಹುಲ್ 20 ರನ್ ಗಳಿಸಿದರು. RCB ಪರ ಮ್ಯಾಕ್ಸ್ ವೆಲ್ 2, ರೀಸ್ ಟೋಪಿ, ಯಶ್ ದಯಾಳ್ ಹಾಗೂ ಸಿರಾಜ್ ತಲಾ ಒಂದು ವಿಕೆಟ್ ಪಡೆದರು.