ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೊಸ ಮನೆ ಕಟ್ಟಿಸೋ ಪ್ಲ್ಯಾನ್ ಇದ್ಯಾ!? ಹಾಗಿದ್ರೆ ಈ ಸುದ್ದಿ ನೀವು ನೋಡಲೇಬೇಕು.
ಎಸ್, ನಗರದಲ್ಲಿ ನಿರ್ಮಾಣವಾಗುವ ಹೊಸ ಮನೆಗಳಿಗೆ ಗ್ರೇ ವಾಟರ್ ರೀಸೈಕ್ಲಿಂಗ್ ಕಡ್ಡಾಯಕ್ಕೆ ಜಲಮಂಡಳಿ ಚಿಂತನೆ ನಡೆಸಿದೆ.
ಕಾವೇರಿ ನೀರು ವ್ಯರ್ಥ ತಡೆಯುವ ದೃಷ್ಟಿಯಿಂದ ಯೋಜನೆಗೆ ಚಿಂತನೆ ನಡೆಸಿದೆ. ಕಳೆದ ಬೇಸಿಗೆಯಿಂದ ನಗರ ಪ್ರದೇಶಗಳಲ್ಲಿ ಉಂಟಾದ ನೀರಿನ ಬಿಕ್ಕಟ್ಟು ಮರುಕಳಿಸಬಾರದು. ಮುಂದಿನ ದಿನಗಳಲ್ಲಿ ಸಮಸ್ಯೆಗಳನ್ನ ತಡೆಗಟ್ಟುವ ನಿಟ್ಟಿನಲ್ಲಿ ಜಲಮಂಡಳಿ ಈ ಯೋಜನೆ ರೂಪಿಸಿದೆ. ಶೀಘ್ರದಲ್ಲೇ ಯೋಜನೆ ಜಾರಿ ಸಾಧ್ಯತೆ ಇದೆ
ಏನಿದು ಗ್ರೇ ವಾಟರ್ ರೀಸೈಕ್ಲಿಂಗ್?
* ದಿನನಿತ್ಯ ಬಳಸುವ ಸ್ನಾನ, ಪಾತ್ರೆ ಮತ್ತು ಬಟ್ಟೆ ತೊಳೆದ, ಅಡುಗೆ ಮನೆ ಮತ್ತು ಮನೆ ಬಳಕೆಯ ಇತರೆ ನೀರನ್ನ ಮರುಬಳಕೆ ಮಾಡುವುದು.
* ಮಲ ಮಿಶ್ರಿತ ಅಲ್ಲದ ತ್ಯಾಜ್ಯ ನೀರನ್ನ ಮರುಬಳಕೆ ವ್ಯವಸ್ಥೆ.
* ಮನೆಯಲ್ಲಿ ಸ್ಯಾನಿಟರಿ ಮತ್ತು ಗ್ರೇ ವಾಟರ್ ಪ್ರತ್ಯೇಕವಾಗಿ ಹರಿಯಲು ಎರಡು ಪೈಪ್ಲೈನ್ ಮಾಡಿಸುವುದು.
* ಈ ಮೂಲಕ ಗ್ರೇ ವಾಟರ್ ಸಂಗ್ರಹಕ್ಕೆ ಪ್ರತ್ಯೇಕವಾದ ಸಿಂಟೆಕ್ಸ್ ಅಥವಾ ಟ್ಯಾಂಕ್ ವ್ಯವಸ್ಥೆ ಮಾಡಿಕೊಳ್ಳುವುದು.
* ರೀಸೈಕ್ಲಿಂಗ್ ಮಾಡಿದರೆ, ಮನೆಯ ಕೈ-ತೋಟ ಮತ್ತು ಶೌಚಗೃಹದ ಫ್ಲಶ್ಗೆ ಬಳಸುವ ಮೂಲಕ ಕಾವೇರಿ ನೀರಿನ ಉಳಿತಾಯ.
* ಹೀಗೆ ಮಾಡುವಾಗ ಯಾವುದೇ ರೀತಿಯ ಶಾಂಪೂ, ಸೋಪಿನ ಕವರ್ಗಳು, ಕಸ, ಕಡ್ಡಿಗಳು ಗ್ರೇ ವಾಟರ್ನಲ್ಲಿ ಸೇರದಂತೆ ಕ್ರಮ ವಹಿಸಬೇಕು.
ಪ್ರತ್ಯೇಕ ಇಂಗು ಗುಂಡಿಯನ್ನು ನಿರ್ಮಿಸಿ ಇಂಗಿಸಬಹುದು.
* ಕಸ, ಕಡ್ಡಿ ಮತ್ತು ಘನ ವಸ್ತುಗಳು ಇಂಗುಗುಂಡಿ ಸೇರದಂತೆ ನೋಡಿಕೊಳ್ಳಬೇಕು
* ನೀರನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಪರಿಣಾಮ ಕಾವೇರಿ ನೀರಿನ ಬಳಕೆ ಹೆಚ್ಚಾಗುತ್ತದೆ.
* ಮನೆಯ ಕೈ-ತೋಟ ಮತ್ತು ಶೌಚಗೃಹದ ಫ್ಲಶ್ಗೆ ಬಳಸುವ ಮೂಲಕ ಕಾವೇರಿ ನೀರನ್ನು ವ್ಯರ್ಥ ಮಾಡಲಾಗ್ತಿದೆ.
* ಗ್ರೇ ವಾಟರ್ ಅನ್ನೂ ಚರಂಡಿಗೆ ಬಿಡುತ್ತಿರುವ ಪರಿಣಾಮ ಒಳಚರಂಡಿಯ ಮೇಲೆ ಒತ್ತಡ ಹೆಚ್ಚಾಗುತ್ತಿದೆ.
* ಹಾಗಾಗಿ ಗ್ರೇ ವಾಟರ್ ರೀಸೈಕ್ಲಿಂಗ್ ಮೂಲಕ ನೀರಿನ ಅಭಾವ ಕಡಿಮೆ ಮಾಡಬಹುದು ಎನ್ನುವ ಲೆಕ್ಕಾಚಾರ.