ದೇಹದ ಆರೋಗ್ಯದ ಜೊತೆಗೆ ಚರ್ಮದ ಆರೋಗ್ಯದ ಬಗ್ಗೆಯೂ ಗಮನ ಹರಿಸುವುದು ಮುಖ್ಯ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಗಂಭೀರ ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ನಿತ್ಯ ಪಾರ್ಲರ್ ಗೆ ಹೋಗಿ ತ್ವಚೆಯ ಆರೈಕೆ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಇಲ್ಲಿದೆ ನೋಡಿ ಟಿಪ್ಸ್.
ದಿನನಿತ್ಯ ಪಾರ್ಲರ್ಗೆ ಹೋದ್ರೆ ವೆಚ್ಚವೂ ಹೆಚ್ಚು. ಮತ್ತು ಸಮಯ ಕೂಡ ಅಷ್ಟೊಂದು ಇರುವುದಿಲ್ಲ. ಆದರೆ ಇದೆಲ್ಲದಕ್ಕೂ ಒಂದು ಮಾರ್ಗವಿದೆ. ತ್ವಚೆಯ ಆರೈಕೆಯನ್ನು ನಮ್ಮ ಮನೆಯ ಸುತ್ತಲಿರುವ ಅಥವಾ ನಮ್ಮ ಕೈಯಲ್ಲಿರುವ ವಸ್ತುಗಳನ್ನು ಬಳಸಿ ಮನೆಯಲ್ಲಿಯೇ ಮಾಡಬಹುದು. ಅದರಲ್ಲೂ ಈ ಬಿಸಿಯಲ್ಲಿ ದೇಹ ಒಣಗಿದರೆ ಚರ್ಮವೂ ಒಣಗುತ್ತದೆ. ಅದನ್ನೇ ನಾವು ಟ್ಯಾನ್ ಎಂದು ಕರೆಯುತ್ತೇವೆ
ಆದರೆ ಬೇಸಿಗೆಯಲ್ಲಿ ಪ್ರತಿ ರಾತ್ರಿ ಮಲಗುವ ಮುನ್ನ ಈ ಮನೆಮದ್ದನ್ನು ಒಮ್ಮೆ ಟ್ರೈ ಮಾಡಿ ಮತ್ತು ನೀವು ಹೊಳೆಯುವ ಮತ್ತು ಮಂದವಾದ ಚರ್ಮವನ್ನು ಈ ಮೂಲಕ ಪಡೆಯಬಹುದು. ಹಾಗಿದ್ರೆ ಆ ಮನೆಮದ್ದು ಯಾವುದು? ಹೇಗೆ ಅಪ್ಲೈ ಮಾಡಬೇಕು? ಇವೆಲ್ಲದರ ಮಾಹಿತಿ ಇಲ್ಲಿದೆ.
ಸೌತೆಕಾಯಿ ರಸ: ಬೇಸಿಗೆಯಲ್ಲಿ ದೇಹದ ತ್ವಚೆಯನ್ನು ಕಾಪಾಡಿಕೊಳ್ಳಲು ಸೌತೆಕಾಯಿ ಬಹಳ ಸಹಕಾರಿಯಾಗುತ್ತೆ. ಸೌತೆಕಾಯಿ ರಸವು ಚರ್ಮವನ್ನು ತಂಪಾಗಿರಿಸುತ್ತದೆ. ಇದು ಶಾಖದಿಂದ ಉಂಟಾಗುವ ಅನೇಕ ಚರ್ಮದ ಸಮಸ್ಯೆಗಳನ್ನು ನಿವಾರಿಸುತ್ತದೆ.
ಪ್ರತಿ ರಾತ್ರಿ ಮಲಗುವ ಮುನ್ನ ನಿಮ್ಮ ಮುಖವನ್ನು ತೊಳೆಯಿರಿ, ಚೆನ್ನಾಗಿ ಒಣಗಿಸಿ ಮತ್ತು ಈ ಸೌತೆಕಾಯಿ ರಸವನ್ನು ನಿಧಾನವಾಗಿ ಮುಖಕ್ಕೆ ಹಚ್ಚಿ ಮತ್ತು ರಾತ್ರಿಯಿಡೀ ಬಿಡಿ. ಇದು ಮೊಡವೆ ಸಮಸ್ಯೆಗಳನ್ನು ಹೋಗಲಾಡಿಸಿ ಚರ್ಮವನ್ನು ನೈಸರ್ಗಿಕವಾಗಿ ಹೊಳೆಯುವಂತೆ ಮಾಡುತ್ತದೆ.
ಕೂದಲು ಮತ್ತು ದೇಹವನ್ನು ಹೊರತುಪಡಿಸಿ, ಮೊಸರು ಚರ್ಮಕ್ಕೂ ತುಂಬಾ ಒಳ್ಳೆಯದು. ಮೊಸರಿನಲ್ಲಿ ಕ್ಯಾಲ್ಸಿಯಂ, ಪ್ರೊಟೀನ್ ಮತ್ತು ವಿಟಮಿನ್ ಡಿ ಹೇರಳವಾಗಿದ್ದು ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಮೊಸರನ್ನು ಪ್ರತಿನಿತ್ಯ ತ್ವಚೆಗೆ ಹಚ್ಚುವುದರಿಂದ ಮೊಡವೆ ಮತ್ತು ಕಣ್ಣಿನ ಕೆಳಗಿರುವ ಡಾರ್ಕ್ ಸರ್ಕಲ್ಗಳನ್ನು ನಿವಾರಿಸಬಹುದು.
ಮೊಸರು ಫೇಸ್ ಪ್ಯಾಕ್ ಮಾಡುವುದು ಹೇಗೆ? ಒಂದು ಬಟ್ಟಲಿನಲ್ಲಿ ಸ್ವಲ್ಪ ಮೊಸರು ತೆಗೆದುಕೊಂಡು ಮಲಗುವ ಮುನ್ನ 5 ನಿಮಿಷಗಳ ಕಾಲ ಮಸಾಜ್ ಮಾಡಿ. ನಂತರ ರಾತ್ರಿಯಿಡೀ ಹಾಗೇ ಬಿಡಿ.
ಮರುದಿನ ಬೆಳಿಗ್ಗೆ ನಿಮ್ಮ ಮುಖವನ್ನು ಶುದ್ಧ ನೀರಿನಿಂದ ತೊಳೆಯಿರಿ. ಹೀಗೆ ಮಾಡಿದರೆ ಎರಡೇ ದಿನಗಳಲ್ಲಿ ವ್ಯತ್ಯಾಸ ಕಾಣುತ್ತೆ. ಮುಖದ ತ್ವಚೆಯ ಸೌಂದರ್ಯದ ಬಗ್ಗೆ ಕಾಳಜಿ ವಹಿಸುವವರು ಈ ಬೇಸಿಗೆಯಲ್ಲಿ ಹೆಚ್ಚು ಗಮನ ಹರಿಸಬೇಕು. ಆದರೆ ಖರ್ಚಿಲ್ಲದೆ ಮನೆಯಲ್ಲಿಯೇ ಕೆಲವೊಂದು ಟಿಪ್ಸ್ ಬಳಸಿದ್ರೆ ಇನ್ನೂ ಒಳ್ಳೆಯದು.