ಸೂರ್ಯನ ಬಿಸಿಲಿನಿಂದ ಕುತ್ತಿಗೆ ಸುತ್ತ ಕಪ್ಪು ಕಲೆಗಳು ಉಂಟಾಗುತ್ತದೆ. ಈ ಕಪ್ಪು ಕಲೆಗಳನ್ನು ಹೈಪರ್ಪಿಗ್ಮೆಂಟೇಶನ್ ಎಂದು ಕರೆಯಲಾಗುತ್ತದೆ.
ಬೇಸಿಗೆಯ ಧಗೆ ಹೆಚ್ಚಾಗಿರುವುದರಿಂದ ವಿಪರೀತ ಸೆಖೆ ಜನರನ್ನು ಕಾಡುತ್ತಿದೆ.
ಈ ನಡುವೆ ಎಷ್ಟೇ ಕ್ರೀಮ್-ಲೋಷನ್, ಫೇಶಿಯಲ್-ಸ್ಕ್ರಬ್ಬಿಂಗ್ ಮಾಡಿದರೂ ಅನೇಕ ಮಂದಿ ಸೆಖೆಯಿಂದ ಕುತ್ತಿಗೆಯ ಸುತ್ತಲಿನ ಕಪ್ಪು ಕಲೆಗಳ ಸಮಸ್ಯೆಯಿಂದ ಬೇಸತ್ತಿದ್ದಾರೆ.
ಯಾವಾಗಲೂ ಮುಖದ ಮೇಲಿನ ಕಲೆಗಳು, ಕುತ್ತಿಗೆಯ ಭಾಗದಲ್ಲಿ ಕಪ್ಪು ಕಲೆಗಳು, ಅಲ್ಲಲ್ಲಿ ಗುಳ್ಳೆಗಳು ಸೌಂದರ್ಯವನ್ನು ಹಾಳು ಮಾಡುತ್ತದೆ. ವಿಶೇಷವಾಗಿ ಬೇಸಿಗೆಯಲ್ಲಿ ಈ ಸಮಸ್ಯೆ ಹೆಚ್ಚಾಗಿರುತ್ತದೆ. ಇದಲ್ಲದೇ ಅನೇಕ ಮಂದಿ ತಮ್ಮ ಮುಖ ಅಥವಾ ಕುತ್ತಿಗೆಯ ಮೇಲೆ ಸನ್ಸ್ಕ್ರೀನ್ ಅನ್ನು ಹಚ್ಚುವುದಿಲ್ಲ. ಇದರ ಪರಿಣಾಮ ಸೂರ್ಯನ ಬಿಸಿಲಿನಿಂದ ಕುತ್ತಿಗೆ ಸುತ್ತ ಕಪ್ಪು ಕಲೆಗಳು ಉಂಟಾಗುತ್ತದೆ. ಈ ಕಪ್ಪು ಕಲೆಗಳನ್ನು ಹೈಪರ್ಪಿಗ್ಮೆಂಟೇಶನ್ ಎಂದು ಕರೆಯಲಾಗುತ್ತದೆ. ಅಕಾಂತೋಸಿಸ್ ನಿಗ್ರಿಕಾನ್ಸ್, ಹಾರ್ಮೋನ್ ಸಮಸ್ಯೆ, ಕುತ್ತಿಗೆಯ ಸುತ್ತಾ ಕಪ್ಪು ಕಲೆಗಳನ್ನು ಉಂಟು ಮಾಡುತ್ತದೆ. ಈ ಸಮಸ್ಯೆಯನ್ನು ನಿಭಾಯಿಸಲು ಅನೇಕ ಮಂದಿ ವಿವಿಧ ರೀತಿಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಸೌಂದರ್ಯವರ್ಧಕಗಳನ್ನು ಬಳಸುತ್ತಾರೆ. ಆದರೆ ನಾವು ಬಳಸುವ ರಾಸಾಯನಿಕ ಉತ್ಪನ್ನಗಳು ಕೆಲವೊಮ್ಮೆ ನಮ್ಮ ಮೇಲೆ ಅಡ್ಡ ಪರಿಣಾಮ ಬೀರಬಹುದು ಎಂಬುದನ್ನು ನೆನಪಿಟ್ಟುಕೊಳ್ಳಿ. ಹಾಗಾಗಿ ಕುತ್ತಿಗೆಯ ಮೇಲಿನ ಕಪ್ಪು ಕಲೆಗಳನ್ನು ಹೋಗಲಾಡಿಸಲು ಹರಸಾಹಸ ಪಡುವ ಬದಲು ನಾವಿಂದು ತಿಳಿಸುವ ಕೆಲ ಮನೆಮದ್ದುಗಳನ್ನು ಬಳಸುವ ಮೂಲಕ ಕೇವಲ 7 ದಿನಗಳಲ್ಲಿ ಕುತ್ತಿಗೆಯನ್ನು ಬಿಳುಪಾಗಿಸಿಕೊಳ್ಳಿ.
ಅಲೋವೆರಾ: ಕೆಲವು ಕಿಣ್ವಗಳು ಕುತ್ತಿಗೆಯ ಮೇಲೆ ಕಪ್ಪು ಕಲೆಗಳನ್ನು ಉಂಟುಮಾಡುತ್ತವೆ. ಅಲೋವೆರಾ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ, ಇದು ಈ ಕಿಣ್ವಗಳ ಚಟುವಟಿಕೆಯನ್ನು ಪ್ರತಿಬಂಧಿಸುತ್ತದೆ. ಇದು ಚರ್ಮವನ್ನು ತೇವವಾಗಿಡುತ್ತದೆ. ಅಲೋವೆರಾ ಜೆಲ್ ಅಥವಾ ತಾಜಾ ಅಲೋವೆರಾ ಜೆಲ್ ಅನ್ನು ಕುತ್ತಿಗೆಯ ಕಪ್ಪು ಜಾಗಕ್ಕೆ ಹಚ್ಚಿ 20 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ
ಅಡಿಗೆ ಸೋಡಾ: ಎರಡು ಚಮಚ ಅಡಿಗೆ ಸೋಡಾವನ್ನು ನೀರಿನಲ್ಲಿ ಮಿಶ್ರಣ ಮಾಡಿ. ಕಪ್ಪು ಕಲೆಗಳ ಮೇಲೆ ಹಚ್ಚಿ. ಇದು ಒಣಗಿದ ನಂತರ ಒದ್ದೆಯಾದ ಬೆರಳುಗಳಿಂದ ಸ್ಕ್ರಬ್ ಮಾಡಿ. ಅಡಿಗೆ ಸೋಡಾದ ನಂತರ ಮಾಯಿಶ್ಚರೈಸರ್ ಅನ್ನು ಹಚ್ಚುವುದನ್ನು ಮರೆಯಬೇಡಿ.
ಆಲೂಗೆಡ್ಡೆ ಜ್ಯೂಸ್: ಆಲೂಗಡ್ಡೆ ಬ್ಲೀಚಿಂಗ್ ಗುಣಗಳನ್ನು ಹೊಂದಿದ್ದು ಅದು ಚರ್ಮದ ಟೋನ್ ಅನ್ನು ಹಗುರಗೊಳಿಸುತ್ತದೆ. ಇದಕ್ಕಾಗಿ ಒಂದು ಆಲೂಗಡ್ಡೆ ತೆಗೆದುಕೊಂಡು ಅದರ ರಸವನ್ನು ಹೊರತೆಗೆಯಿರಿ. ಈಗ ಈ ರಸದಲ್ಲಿ ಹತ್ತಿ ಉಂಡೆಯನ್ನು ಅದ್ದಿ, ಕುತ್ತಿಗೆಯ ಸುತ್ತ ಕಪ್ಪು ಕಲೆಗಳಿರುವ ಜಾಗಗಳನ್ನು ಹಚ್ಚಿ. ಇದು ಸಂಪೂರ್ಣವಾಗಿ ಒಣಗಿದ ನಂತರ ನೀರಿನಿಂದ ತೊಳೆಯಿರಿ.
ಕಡಲೆ ಹಿಟ್ಟು: ಕಡಲೆ ಹಿಟ್ಟು ನಿಮ್ಮ ಮುಖದ ಮೇಲಿನ ಕಲೆಗಳನ್ನು ಕಡಿಮೆ ಮಾಡಿ ಕುತ್ತಿಗೆಯ ಚರ್ಮವನ್ನು ಸಹ ಹೊಳಪಿನಿಂದ ಕೂಡಿರುವಂತೆ ಮಾಡುತ್ತದೆ. ಅಷ್ಟೇ ಅಲ್ಲದೆ ಚರ್ಮದ ಭಾಗದಲ್ಲಿ ಕಂಡುಬರುವ ಧೂಳು, ಕೊಳೆ ಇತ್ಯಾದಿಗಳನ್ನು ಸಹ ತೆಗೆದು ಹಾಕುತ್ತದೆ.