ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ಸ್ ಅವರ ವಿವಾಹ ಪೂರ್ವ ಸಮಾರಂಭ ಇತ್ತೀಚೆಗಷ್ಟೇ ಗುಜರಾತ್ ನ ಜಾಮ್ ನಗರ ಅದ್ಧೂರಿಯಾಗಿ ನಡೆದಿದೆ. ಈ ವೇಳೆ ಅಂಬಾನಿ ಕುಟುಂಬಸ್ಥರು ಧರಿಸಿದ್ದ ವಸ್ತ್ರ ಸಾಕಷ್ಟು ಸುದ್ದಿಯಾಗಿದೆ.
ಅಂಬಾನಿ ಕುಟುಂಬದ ಮಹಿಳೆಯರು ಧರಿಸಿದ ವಸ್ತ್ರಗಳು ಹಾಗೂ ಆಭರಣಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಮುಖೇಶ್ ಅಂಬಾನಿಯ ಏಕೈಕ ಪುತ್ರಿ ಇಶಾ ಅಂಬಾನಿ ವಿವಾಹ ಪೂರ್ವ ಸಮಾರಂಭದಲ್ಲಿ ರೆಡ್ ಮತ್ತು ಗೋಲ್ಡನ್ ಮಿಶ್ರಿತ ಗ್ರ್ಯಾಂಡ್ ಲೆಹಂಗಾ ತೊಟ್ಟು ಮಿಂಚಿದ್ದು ಸೆಲೆಬ್ರೆಟಿಗಳು ಸೇರಿದಂತೆ ಎಲ್ಲರ ಗಮನ ಸೆಳೆದಿದೆ.
ಇಶಾ ಧರಿಸಿದ್ದ ಈ ಗ್ರ್ಯಾಂಡ್ ಲೆಹಾಂಗದ ಬ್ಲೌಸ್ ಅನ್ನು ಸಂಪೂರ್ಣವಾಗಿ ಚಿನ್ನ, ವಜ್ರದಿಂದ ವಿನ್ಯಾಸಗೊಳಿಸಲಾಗಿದ್ದು, ಸದ್ಯ ಈ ಬ್ಲೌಸ್ ವಿನ್ಯಾಸಗೊಳಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಅದ್ಧೂರಿ ಬ್ಲೌಸ್ ಅನ್ನು ಸೆಲೆಬ್ರೆಟಿ ಕಾಸ್ಟೂಮ್ ಡಿಸೈನರ್ ಅಬು ಜಾನಿ ಸಂದೀಪ್ ಖೋಸ್ಲಾ ಅವರ ತಂಡ ವಿನ್ಯಾಸಗೊಳಿಸಿದೆ. ಇಶಾ ಅಂಬಾನಿಯ ವೈಯಕ್ತಿಕ ಸಂಗ್ರಹದ ಚಿನ್ನ, ವಜ್ರ, ಮುತ್ತು, ರತ್ನ, ಪಚ್ಚೆ, ರತ್ನ ಸೇರಿಸಿ ಇಡೀ ಬ್ಲೌಸ್ ತಯಾರಿಸಲಾಗಿದೆ.
ಕೋಟಿ ಕೋಟಿ ಬೆಲೆ ಬಾಳುವ ಗ್ರ್ಯಾಂಡ್ ಲೆಹಾಂಗ ತೊಟ್ಟು ಮಿಂಚಿದ ಇಶಾ ಅಂಬಾನಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.