ಗಾಜಾ ನಗರದ ಅಲ್-ಶಿಫಾ ಆಸ್ಪತ್ರೆಯ ಮೇಲೆ ದಾಳಿ ನಡೆಸಿದ್ದು 20ಕ್ಕೂ ಹೆಚ್ಚು ಪ್ಯಾಲೆಸ್ತೀನ್ ಭಯೋತ್ಪಾದಕ ಹತ್ಯೆ ಮಾಡಲಾಗಿದೆ. ಘಟನೆಯಲ್ಲಿ 12ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಇಸ್ರೇಲ್ನ ಸೇನೆ ತಿಳಿಸಿದೆ.
ಅಲ್-ಶಿಫಾ ಆಸ್ಪತ್ರೆಯಲ್ಲಿ ನಡೆದ ವಿವಿಧ ಕಾರ್ಯಾಚರಣೆಯಲ್ಲಿ ಇದುವರೆಗೆ ಇಪ್ಪತ್ತು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದ್ದು ಡಜನ್ಗಟ್ಟಲೆ ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದೇವೆ ಎಂದು ಸೇನೆಯು ಹೇಳಿಕೆಯಲ್ಲಿ ಮಾಹಿತಿ ನೀಡಿದೆ.
ಇಸ್ರೇಲ್ ಈ ಹಿಂದೆ ಹಮಾಸ್ ಆಂತರಿಕ ಭದ್ರತಾ ಅಧಿಕಾರಿ ಎಂದು ಗುರುತಿಸಲಾದ ಫೈಕ್ ಅಲ್-ಮಭೌಹ್ ನನ್ನು ಹತ್ಯೆ ಮಾಡಿದ್ದಾಗಿ ವರದಿ ಮಾಡಿದೆ. ಗಾಜಾ ಪೊಲೀಸ್ ಮೂಲವೊಂದು ಆತನ ಸಾವನ್ನು ದೃಢಪಡಿಸಿದೆ.