ಅಮೆರಿಕ: 2008ರಲ್ಲಿ ಮುಂಬೈ ಮೇಲೆ ಪಾಕ್ ಉಗ್ರರು ದಾಳಿ ನಡೆಸಿದ ಹೊರತಾಗಿಯೂ ಆ ದೇಶದ ಅಂದಿನ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಯಾವುದೇ ಪ್ರತಿಕಾರದ ಕ್ರಮ ಕೈಗೊಂಡಿರಲಿಲ್ಲ. ಹಮಾಸ್ ವಿರುದ್ಧವೂ ಇಸ್ರೇಲ್ ಇಂಥದ್ದೇ ನಿಲುವು ಪ್ರದರ್ಶಿಸಬಹುದಿತ್ತು ಎಂದು ಅಮೆರಿಕದ ಖ್ಯಾತ ಲೇಖಕ ಥಾಮಸ್ ಫ್ರೈಡ್ಮನ್ ಹೇಳಿದ್ದಾರೆ.
ಹಮಾಸ್- ಇಸ್ರೇಲ್ ಯುದ್ಧದ ಕುರಿತು ಥಾಮಸ್ ಬರೆದಿರುವ ಲೇಖನ ‘ದಿ ನ್ಯೂಯಾರ್ಕ್ ಟೈಮ್ಸ್’ನಲ್ಲಿ ಪ್ರಕಟವಾಗಿದ್ದು, ಈ ಲೇಖನದಲ್ಲಿ ಮೇಲಿನ ತಮ್ಮ ಅಭಿಪ್ರಾಯವನ್ನು ಅವರು ಹೇಳಿದ್ದಾರೆ. ‘ನಾನು ಇಸ್ರೇಲ್- ಹಮಾಸ್ ಯುದ್ಧವನ್ನು ನೋಡುತ್ತಿದ್ದೇನೆ. ಈ ವೇಳೆ ನನ್ನ ನೆಚ್ಚಿನ ವಿಶ್ವನಾಯಕರಲ್ಲಿ ಒಬ್ಬರಾದ ಮನಮೋಹನ್ ಸಿಂಗ್ ಬಗ್ಗೆ ನಾನು ಯೋಚಿಸುತ್ತಿದ್ದೇನೆ.
10 ಜನ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರು ಭಾರತದೊಳಗೆ ನುಸುಳಿ ಮುಂಬೈನಲ್ಲಿ 160ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಿದಾಗ ಮನಮೋಹನ್ ಅವರು ಪಾಕಿಸ್ತಾನ ಅಥವಾ ಉಗ್ರರ ವಿರುದ್ಧ ಯಾವುದೇ ಪ್ರತಿಕಾರ ತೀರಿಸಿಕೊಳ್ಳಲಿಲ್ಲ. ಇದು ಆಗ ಸರಿಯಾದ ನಿರ್ಧಾರವಾಗಿತ್ತು’ ಎಂದಿದ್ದಾರೆ.