ಹುಬ್ಬಳ್ಳಿ: ರಾಜ್ಯಾದ್ಯಂತ ಇಂದು ಅಂತಿಮ ಹಂತದ ಬಹಿರಂಗ ಪ್ರಚಾರ,ಮನೆಮನೆಗೆ ಹೋಗಿ ಪ್ರಚಾರ ಮಾಡುವಂತಹದು. ತಮ್ಮ ತಮ್ಮ ಕ್ಷೇತ್ರ ಮತ್ತು ಸೂಚನೆ ಕೊಟ್ಟಿದ್ದೇನೆ. ಬಹಳ ದೊಡ್ಡ ಪ್ರಮಾಣದಲ್ಲಿ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ 1.5ಲಕ್ಷಕೋಟಿ ಭ್ರಷ್ಟಾಚಾರ ರೈತರಿಗೆ ಹಂಚುತ್ತೇವೆ ಎಂಬ ಕಾಂಗ್ರೆಸ್ ಹೇಳಿಕೆ ವಿಚಾರ. ಅಬ್ಬಾ ಎಲ್ಲಿಂದ ತರ್ತಾರೆ, ಇದನ್ನು ನೀವ ಪತ್ರಕರ್ತರು ನಂಬ್ತೀರಲ್ಲ ನಂಬಿ ನನ್ನ ಪ್ರಶ್ನೆ ಕೇಳ್ತಿರಲ್ಲ. ನನಗೆ ಆಶ್ಚರ್ಯ ಆಗಿದೆ, ನಾನು ಚುನಾವಣಾ ಆಯೋಗಕ್ಕೆ ಕೇಳಿದೆ. ಇದಕ್ಕೆ ಏನು ಫ್ರೂಪ್ ಇದೆ ಕೊಡಿ ಅಂತಾ ಕೇಳಿದೆ ಕೊಡಕೆ ಆಗಿಲ್ಲ ಅವರಿಗೆ ಒಂದೇ ಒಂದು ಕೇಸ್ ಇಲ್ಲ ಸಾಕ್ಷಿ ಇಲ್ಲ ಅವರ ಹತ್ರ. ಇಷ್ಟೆಲ್ಲಾ ಮಾತಾಡೋ ಕಾಂಗ್ರೆಸ್ ಮೇಲೆ ಕೇಸ್ ಇಲ್ವಾ, ತಮ್ಮ ಮೇಲೆನೆ ಕೇಸ್ ಇದ್ದು ಉತ್ತರ ಕೊಡೊಕೆ ಆಗದೇ ಕೋರ್ಟ್ ನಲ್ಲಿ ಅಲೆದಾಡುತ್ತಾರೆ ಎಂದರು.
ವೀರಶೈವ ಲಿಂಗಾಯತ ಮಹಾಸಭಾ ಕಾಂಗ್ರೆಸ್ ಬೆಂಬಲಿಸಿ ನಿರ್ಣಯ ವಿಚಾರಕ್ಕೆ. ವೀರಶೈವ ಯಾವುದೇ ಸಂಸ್ಥೆಯಡಿ ಸೀಮಿತ ಆಗಿಲ್ಲ, ಅದಕ್ಕೆ ಬಹಳ ಗೌರವ ಕೊಡ್ತೇವಿ. ಚುನಾವಣಾ ಸಂದರ್ಭದಲ್ಲಿ ವೀರಶೈವ ಮಹಾಸಭಾ ಬಳಕೆ ಮಾಡೊದು ಸರಿ ಅಲ್ಲಾ. ಇದುವರೆಗೆ ಆಗಿಲ್ಲ ಇದು ಆಗಬಾರದು. ಲಿಂಗಾಯ ವೇದಿಕೆ ಅನೋದು ಎಲ್ಲಿಯೂ ಇಲ್ವೆ ಇಲ್ಲ. ನಾಲ್ಕು ಜನರು ಸೇರಿ ಏನೋ ಹೇಳಿದರೆ ಇಡೀ ಲಿಂಗಾಯತ ಸಮುದಾಯ ಧ್ವನಿ ಆಗುತ್ತಾ, ಅದು ಸಮುದ್ರ ಅದು ಚುನಾವಣಾ ಸಂದರ್ಭದಲ್ಲಿ ಮಾತ್ರ ಇಂತವೆಲ್ಲ ಸಂಸ್ಥೆಗಳು ಹುಟ್ಟಿಕೊಳ್ಳುತ್ತವೆ ಎಂದರು.
ಐಟಿ, ಇಡಿ ದಾಳಿ ಕಾಂಗ್ರೆಸ್ ಬೆಂಬಲಿಗರ ಆಗುತ್ತಿವೆ ಎಂಬ ವಿಚಾರಕ್ಕೆ. ಇಡಿ ಕೇಂದ್ರ ಸರ್ಕಾರ ಎಲ್ಲ ಜಿಲ್ಲೆಯಲ್ಲಿ ಇದೆ. ಐಟಿ ಇಡಿ ಅಧಿಕಾರಿಗಳು ಇದ್ದಾರೆ. ಎಲ್ಲಿ ಮಾಹಿತಿ ಸಿಗುತ್ತೆ, ಯಾರು ತಪ್ಪು ಮಾಡಿದ್ದಾರೆ ನಾವೇನು ಮಾಡಲು ಸಾಧ್ಯ. ಎಲ್ಲಿ ತಪ್ಪು ಆಗಿದೆ ಅಲ್ಲಿ ಆಗುತ್ತೆ ಎಂದ ಸಿಎಂ. ಕಾಂಗ್ರೆಸ್ ನವರು ಬೋಗಿ ಇದು ಯಾವಾಗಲೂ ಮುಂಚೇನ ಹೇಳಿಬಿಡೊದು ನಮ್ಮದ್ದು ರೇಡ್ ಆಗುತ್ತೆ ಅಂತಾ. ಅವರು ಮಾಡೊದು ನಿಜ ಅದನ್ನ ತಪ್ಪಿಸಲು ಈತರ ಮಾಡ್ತಾರೆ. ಎಂ.ಬಿ.ಪಾಟೀಲ ಹೇಳ್ತಾರೆ, ಹೆಬ್ಬಾಳ್ಕರ್ ಹೇಳ್ತಾರೆ.
ಅವರ ಮಾಡೊದು ನಿಜ ಅದನ್ನ ತಪ್ಪಿಸೊದಕ್ಕೆ ಹೇಳ್ತಾರೆ. ಅವರು ತಪ್ಪು ಮಾಡೊದನ್ನ ಬಿಡಲು ಹೇಳಿ.ನಮ್ಮ ರಾಷ್ಟ್ರೀಯ ನಾಯಕರ ಎಲ್ಲ ಚುನಾವಣೆ ಬಂದಿದ್ದಾರೆ.ಅವರದ್ದು ಕರ್ನಾಟಕದ ಸಂಬಂಧ ಇದೆ ಕರ್ನಾಟಕ್ಕರ ಇದು ದೊಡ್ಡ ಬೂಸ್ಟರ್ ಡೋಸ್ ಸಿಗುತ್ತೆ ಎಂದರು.