ಬೆಂಗಳೂರು:- ನಿಮಗೆ ಆಧಾರ್ ನಂಬರ್ ಮರೆತೇಹೋಯ್ತಾ!? ಹಾಗಿದ್ರೆ ಚಿಂತೆ ಬಿಡಿ ಆನ್ಲೈನ್ ನಲ್ಲೇ ಈ ರೀತಿ ಮಾಡಿ.
ಕೆಲವೊಮ್ಮೆ ಆಧಾರ್ ಕಾರ್ಡ್ ಕಳೆದುಹೋಗಿ, ಅದರ ನಂಬರ್ ಕೂಡ ಮರೆತುಹೋಗಿರುವ ಸಾಧ್ಯತೆ ಇಲ್ಲದಿಲ್ಲ. ಆಧಾರ್ ಸಂಖ್ಯೆಯೂ ಗೊತ್ತಿಲ್ಲ, ಅದರೆ ಎನ್ಲೋಲ್ಮೆಂಟ್ ನಂಬರ್ ಗೊತ್ತಿದ್ದರೆ ಆಧಾರ್ ಸಂಖ್ಯೆ ಹೊರತೆಗೆಯಬಹುದು. ಒಂದು ವೇಳೆ ಎನ್ರೋಲ್ಮೆಂಟ್ ನಂಬರ್ ಕೂಡ ಗೊತ್ತಿಲ್ಲದಿದ್ದರೆ? ಈ ಸನ್ನಿವೇಶದಲ್ಲೂ ಆಧಾರ್ ಸಂಖ್ಯೆಯನ್ನು ಮರಳಿ ಪಡೆಯುವ ಅವಕಾಶ ಇದೆ. ಇದು ಬಹಳ ಸರಳ. ಯುಐಡಿಎಐ ವೆಬ್ಸೈಟ್ನಲ್ಲಿ ಮರೆತುಹೋದ ಆಧಾರ್ ನಂಬರ್ ಅನ್ನು ಕಂಡುಹಿಡಿಯಬಹುದು. ಆದರೆ, ಆಧಾರ್ ಕಾರ್ಡ್ನಲ್ಲಿ ನೀವು ನೀಡಿರುವ ನಿಮ್ಮ ಹೆಸರು ಮತ್ತು ಅದಕ್ಕೆ ನೊಂದಾಯಿಸಿರುವ ಮೊಬೈಲ್ ನಂಬರ್ ಇದ್ದರೆ ಸಾಕು. ಆಧಾರ್ ಸಂಖ್ಯೆ ಸುಲಭವಾಗಿ ಕಂಡುಹಿಡಿಯಬಹುದು
ಮರೆತುಹೋದ ಆಧಾರ್ ಸಂಖ್ಯೆಯನ್ನು ಕಂಡು ಹಿಡಿಯಲು ಈ ಮುಂದಿನ ಲಿಂಕ್ ಕ್ಲಿಕ್ ಮಾಡಿ:
ಇಲ್ಲಿ ಆಧಾರ್ ಕಾರ್ಡ್ನಲ್ಲಿರುವ ನಿಮ್ಮ ಪೂರ್ಣ ಹೆಸರು, ಆಧಾರ್ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಅಥವಾ ಇಮೇಲ್ ಐಡಿ ನಮೂದಿಸಿ. ಕ್ಯಾಪ್ಚಾ ಹಾಕಿ ಒಟಿಪಿ ಪಡೆಯಿರಿ.
ಬಳಿಕ ನಿಮ್ಮ ಮೊಬೈಲ್ ನಂಬರ್ಗೆ ಬರುವ ಒಟಿಪಿಯನ್ನು ಹಾಕಿ ಸಲ್ಲಿಸಿ.
ನಿಮ್ಮ ನೊಂದಾಯಿತ ಮೊಬೈಲ್ ನಂಬರ್ಗೆ ಆಧಾರ್ ನಂಬರ್ ಅನ್ನು ಯುಐಡಿಎಐ ವತಿಯಿಂದ ಕಳುಹಿಸಲಾಗುತ್ತದೆ.
ಒಂದು ವೇಳೆ ಆಧಾರ್ಗೆ ನೀವು ಮೊಬೈಲ್ ನಂಬರ್ ಲಿಂಕ್ ಮಾಡದೇ ಹೋಗಿದ್ದು, ಆಗ ಆಧಾರ್ ಸಂಖ್ಯೆ ಮರೆತುಹೋಗಿದ್ದರೆ ಅದನ್ನು ಪಡೆಯುವ ಅವಕಾಶ ಇರುತ್ತದೆ. ಅದಕ್ಕೆ ಆಧಾರ್ ಕೇಂದ್ರಕ್ಕೆ ಹೋಗಿ ಪ್ರಿಂಟ್ ಆಧಾರ್ ಸರ್ವಿಸ್ ಪಡೆಯಬಹುದು.
ಆಧಾರ್ ಸೆಂಟರ್ಗೆ ಹೋಗಿ ನಿಮ್ಮ ಹೆಸರು, ಊರು ಇತ್ಯಾದಿ ವಿವರವನ್ನು ನಮೂದಿಸಿ. ಫಿಂಗರ್ ಪ್ರಿಂಟ್ ಇತ್ಯಾದಿ ಬಯೋಮೆಟ್ರಿಕ್ ಮಾಹಿತಿಯನ್ನು ಒದಗಿಸಿ. ಇದು ಸರಿಹೊಂದಿದರೆ ನಿಮಗೆ ಆಧಾರ್ ಕಾರ್ಡ್ ಅನ್ನು ಅಲ್ಲಿಯೇ ನೀಡಲಾಗುತ್ತದೆ.