ಬೆಂಗಳೂರು: ಸುಧಾಕರ್ ಹಗುರವಾಗಿ ಮಾತಾಡಬಾರದು, ಅದು ಅವರಿಗೆ ಶೋಭೆ ತರಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸುಧಾಕರ್ ಹಗುರವಾಗಿ ಮಾತಾಡಬಾರದು, ಅದು ಅವರಿಗೆ ಶೋಭೆ ತರಲ್ಲ.
ಸುಧಾಕರ್ ಅವರು ಹಾಗೆಲ್ಲ ಮಾತಾಡಬಾರದು ಅಂತ ಆಗ್ರಹ ಮಾಡಲ್ಲ, ಮನವಿ ಮಾಡ್ತೇನೆ. ನಾನು ಸುಧಾಕರ್ ಅವರನ್ನೂ ಭೇಟಿ ಮಾಡ್ತೇನೆ. ನನ್ನ ಮೇಲೆ ಸುಧಾಕರ್ ಆರೋಪ ಮಾಡೋದು ಸರಿಯಲ್ಲ. ಸುಧಾಕರ್ ಅನ್ಯಥಾ ಭಾವಿಸಬಾರದು, ತಪ್ಪು ತಿಳ್ಕೋಬಾರದು. ನನ್ನ ಪಾತ್ರ ಏನೂ ಇಲ್ಲ ತಿಳಿಸಿದರು.
ಶ್ರೀರಾಮುಲು ಅಸಮಾಧಾನ ವಿಚಾರವಾಗಿ ಮಾತನಾಡಿ, ಶ್ರೀರಾಮುಲು ಅವರು ಹಿರಿಯರು. ಸಚಿವರಾಗಿ, ಹಿರಿಯರಾಗಿ ಪಕ್ಷಕ್ಕೆ ಅವರದ್ದೇ ಆದ ಶಕ್ತಿ ತುಂಬಿದ್ದಾರೆ. ಕೋರ್ ಕಮಿಟಿ ಆದ ನಂತರ ನಾನೂ ಮಾತಾಡಿದ್ದೇನೆ.
ಕೋರ್ ಕಮಿಟಿಯಲ್ಲಿ ನಡೆದಿದ್ದು ಮಾಧ್ಯಮಗಳಲ್ಲಿ ಚರ್ಚೆ ಮಾಡಬಾರದು ಅಂತ ಅವರಿಗೆ ಮನವಿ ಮಾಡಿದ್ದೇನೆ. ಏನೇ ಇದ್ದರೂ ಕೂತು ಚರ್ಚಿಸಿ ಬಗೆಹರಿಸಿಕೊಳ್ಳೋಣ ಅಂದಿದ್ದೇನೆ ಎಂದರು. ನಾಳೆ ಯತ್ನಾಳ್ ಟೀಮ್ ಸಭೆ ಹಾಗೂ ರಾಜ್ಯಾಧ್ಯಕ್ಷ ಅಭ್ಯರ್ಥಿ ಆಯ್ಕೆ ವಿಚಾರವಾಗಿ, ‘ಆಲ್ ದಿ ಬೆಸ್ಟ್, ಒಳ್ಳೆಯದಾಗಲಿ ಅವರಿಗೆ’ ಎಂದು ಟಾಂಗ್ ಕೊಟ್ಟರು.