ಬೆಂಗಳೂರು:- ಕರ್ನಾಟಕದಿಂದ ಆಯ್ಕೆ ಆದ ಕೇಂದ್ರ ಸಚಿವೆ ಸುಳ್ಳು ಹೇಳಿದ್ದು ಬೇಸರ ತರಿಸಿದೆ ಎಂದು ಜಿ ಪರಮೇಶ್ವರ್ ಹೇಳಿದ್ದಾರೆ.
ಅನುದಾನದಲ್ಲಿ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ತಾರತಮ್ಯ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಈ ವಿಚಾರವಾಗಿ ಬಿಜೆಪಿ-ಕಾಂಗ್ರೆಸ್ ನಡುವೆ ಆರೋಪ-ಪ್ರತ್ಯಾರೋಪಗಳ ನಡುವೆ ಸಂಸತ್ ಅಧಿವೇಶನದಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಂಕಿ-ಅಂಶಗಳ ಮೂಲಕ ಕಾಂಗ್ರೆಸ್ ಆರೋಪಿಗಳಿಗೆ ತಿರುಗೇಟು ನೀಡಿದ್ದರು. ಈ ವಿಚಾರವಾಗಿ ಮಾತನಾಡಿದ ಸಚಿವರು, ನಿರ್ಮಲಾ ಸೀತಾರಾಮನ್ ಅವರು ಸಂಸತ್ನಲ್ಲಿ ಅತಿ ದೊಡ್ಡ ಸುಳ್ಳು ಹೇಳಿದ್ದಾರೆ ಎಂದಿದ್ದಾರೆ.
ಕೇಂದ್ರದಿಂದ ಒಂದೇ ಒಂದು ರೂಪಾಯಿ ನಮಗೆ ಬಂದಿಲ್ಲ. ಅತಿ ದೊಡ್ಡ ಸುಳ್ಳನ್ನ ಸಂಸತ್ನಲ್ಲಿ ನಿರ್ಮಾಲಾ ಸೀತರಾಮನ್ ಹೇಳಿದ್ದಾರೆ. ಕರ್ನಾಟಕದಿಂದ ಆಯ್ಕೆ ಆಗಿರುವ ಸಚಿವೆ ಸುಳ್ಳು ಹೇಳಿದ್ದು ಬೇಸರ ತರಿಸಿದೆ. ಬರ ಸಂಬಂಧ ರಾಜ್ಯದಲ್ಲಿ ಸರ್ವೆ ಕೆಲಸ ಮಾಡಿಕೊಂಡು ಹೋಗಿದ್ದರು. ಆದರೆ ಹಣ ಬಿಡುಗಡೆ ಮಾಡಿಲ್ಲ. ನಮಗೆ ಕೊಡಬೇಕಾದ ಎನ್ಡಿಆರ್ಎಫ್ ಹಣ ಕೊಡಿ ಎಂದರು