ಭೋಪಾಲ್: ವಿಪಕ್ಷದ ಪ್ರತಿ ನಾಯಕರು (Opposition Leaders) 20 ಲಕ್ಷ ಕೋಟಿ ಹಗರಣದ ಗ್ಯಾರಂಟಿ ಕೊಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ವಿರೋಧ ಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜೂನ್ 23ರಂದು ಪಾಟ್ನಾದಲ್ಲಿ (Patna) ಬಿಹಾರ (Bihar) ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅಯೋಜಿಸಿದ್ದ ಸಭೆಯಲ್ಲಿ ಭಾಗಿಯಾಗಿದ್ದ ವಿರೋಧ ಪಕ್ಷದ ನಾಯಕರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಟೀಕೆ ಮಾಡಿದ್ದು,
ವಿಪಕ್ಷದ ಪ್ರತಿ ನಾಯಕರು 20 ಲಕ್ಷ ಕೋಟಿ ಹಗರಣದ ಗ್ಯಾರಂಟಿ ಕೊಡುತ್ತಾರೆ ಎಂದು ವ್ಯಂಗ್ಯವಾಡಿದರು. ಬೂತ್ (Booth) ಮಟ್ಟದ ಕಾರ್ಯಕರ್ತರ ಜೊತೆಗೆ ಸಂವಾದ ನಡೆಸಿದ ಅವರು, ಗ್ಯಾರಂಟಿ (Guarantee) ಎನ್ನುವ ಪದ ಇತ್ತಿಚೀನ ದಿನಗಳಲ್ಲಿ ಜನಪ್ರಿಯ ವಾಗುತ್ತಿದೆ. ಇದು ಭ್ರಷ್ಟಾಚಾರದ (Corruption) ಗ್ಯಾರಂಟಿ ಎಂದು ನಾಗರಿಕರಿಗೆ ತಿಳಿಸುವುದು ಬಿಜೆಪಿ (BJP) ಕಾರ್ಯಕರ್ತರ ಜವಾಬ್ದಾರಿಯಾಗಿದೆ ಎಂದು ಕೊಂಕು ನುಡಿದರು. ವಿರೋಧ ಪಕ್ಷದ ನಾಯಕರು ಇತ್ತೀಚೆಗೆ ಸಭೆ ನಡೆಸಿದ್ದರು. ಈ ಫೋಟೊವನ್ನು ನೋಡಿದಾಗ ಪ್ರತಿ ನಾಯಕರು 20 ಲಕ್ಷ ಕೋಟಿ ಹಗರಣದ ಗ್ಯಾರಂಟಿ ಕೊಡುತ್ತಾರೆ ಎಂದು ನಿಮಗೆ ಅರ್ಥವಾಗುತ್ತದೆ.
ಇದನ್ನು ಜನರಿಗೆ ಮನವರಿಕೆ ಮಾಡುವುದು ಕಾರ್ಯಕರ್ತರ ಜವಾಬ್ದಾರಿ ಎಂದು ಹೇಳಿದರು. ಎಸಿ ಕೊಠಡಿಗಳಲ್ಲಿ ಕುಳಿತು ಪಕ್ಷವನ್ನು ನಡೆಸುವವರು ಬಿಜೆಪಿ ಕಾರ್ಯಕರ್ತರಲ್ಲ. ಬಿಸಿಲು, ಚಳಿ, ಎಡೆಬಿಡದ ಮಳೆಯಲ್ಲೂ ಕೆಲಸ ಮಾಡಲು ದೂರದ ಪ್ರದೇಶಗಳಿಗೆ ನಾವು ಹೋಗುತ್ತೇವೆ. ಬಿಜೆಪಿ ಕಾರ್ಯಕರ್ತರು ಬಿಜೆಪಿಯಷ್ಟೇ ಅಲ್ಲದೇ ದೇಶದ ಸಂಕಲ್ಪಗಳನ್ನು ಸಾಧಿಸುವ ಬಲಿಷ್ಠ ಸೈನಿಕರು. ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನಿಗೆ ದೇಶದ ಹಿತಾಸಕ್ತಿ ಮುಖ್ಯ. ಪಕ್ಷಕ್ಕಿಂತ ದೇಶ ದೊಡ್ಡದು ಎನ್ನುವ ಶ್ರಮಜೀವಿಗಳು ಎಂದರು.