ಬೆಂಗಳೂರು: ಬಿಜೆಪಿ 40% ಸರ್ಕಾರ ಎನ್ನುವ ಕಾಂಗ್ರೆಸ್ ವಿರುದ್ಧ ಬಿಜೆಪಿ MLC ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ. ಈ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯವನ್ನೇ ಲೂಟಿ ಮಾಡಿದ್ದೇವೆ ಎನ್ನುವ ಅರ್ಥದಲ್ಲಿ ಕಾಂಗ್ರೆಸ್ ಹೇಳುತ್ತಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಯಾವುದೇ ಆಧಾರವಿಲ್ಲದೆ ಈ ರೀತಿ ಮಾತನಾಡುತ್ತಾರೆ. ಹಾಗಾದರೆ ದೇಶದಲ್ಲಿ ಚುನಾವಣಾ ಆಯೋಗ,
ಲೋಕಾಯುಕ್ತ ಹಾಗೂ ಯಾವುದೇ ಕೋರ್ಟ್ನಲ್ಲಿ ದೂರು ಕೊಡಬೇಕಿತ್ತು. ಇವರ ಯೋಗ್ಯತೆಗೆ ಕೊಡೋಕೆ ಆಗಿದೆಯಾ ಎಂದು ಪ್ರಶ್ನಿಸಿದರು. ಆಧಾರವಿಲ್ಲದೆ ಆರೋಪ ಮಾಡುವುದು ತಪ್ಪು. ನಾವು ನಿಮ್ಮ ಮೇಲೆ ಸಾಕಷ್ಟು ಆರೋಪ ಮಾಡಬಹುದು. ಇನ್ಮುಂದೆ ನೀವು ಏನೇ ಮಾತನಾಡಿದರೂ ಆಧಾರ ಕೊಡಬೇಕು. ಇಲ್ಲವಾದರೆ ಜೈಲಿಗೆ ಹೋಗಬೇಕಾಗುತ್ತೆ ಎಂದು ಚಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.