ಆದಾಯ ತೆರಿಗೆ ಇಲಾಖೆ ನಾಸಿಕ್ನಲ್ಲಿರುವ ಪ್ರಸಿದ್ಧ ಜುವೆಲ್ಲರಿ ಅಂಗಡಿ ಮೇಲೆ ದಾಳಿ ನಡೆಸಿ 26 ಕೋಟಿ ರೂ. ನಗದು ಹಣವನ್ನು ಜಪ್ತಿ ಮಾಡಿದೆ. ಅಕ್ರಮ ವಹಿವಾಟು ನಡೆಸಿದ ಆರೋಪದ ಮೇಲೆ ಸುರಾನಾ ಜ್ಯುವೆಲರ್ಸ್ ಮೇಲೆ ದಾಳಿ ನಡೆಸಿದೆ.
ಈ ವೇಳೆ 26 ಕೋಟಿ ರೂ. ನಗದು, 90 ಕೋಟಿ ರೂ. ಮೌಲ್ಯದ ಲೆಕ್ಕಕ್ಕೆ ಸಿಗದ ಸಂಪತ್ತಿನ ದಾಖಲೆಗಳನ್ನು ವಶಪಡಿಸಿಕೊಂಡಿದೆ. ನಗದು ಹಣವನ್ನು ಹಲವು ಚೀಲಗಳಲ್ಲಿ ತುಂಬಿ ಇಡಲಾಗಿತ್ತು. ಅಧಿಕಾರಿಗಳು ಕಚೇರಿಗೆ ತಂದು ಜೋಡಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಈಗ ಹರಿದಾಡುತ್ತಿದೆ.